Updated News From Kaup
ಕಾಶೀ ಸಂತಾನ ಟ್ರಸ್ಟ್ ನೂತನ ಕಚೇರಿ ಉದ್ಘಾಟನೆ, ವಿದ್ಯಾರ್ಥಿ ವೇತನ, ಸಹಾಯಧನ ವಿತರಣೆ

Posted On: 07-11-2021 08:19PM
ಅದಮಾರು: ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನ ನೂತನ ಕಚೇರಿ ಆರಂಭ ಹಾಗೂ ಒಂದೂವರೆ ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನ - ಸಹಾಯ ಧನ ವಿತರಿಸುವ ಕಾರ್ಯಕ್ರಮವು ಅದಮಾರಿನ ಸರ್ವೋದಯ ಸಮುದಾಯ ಭವನದಲ್ಲಿ ನಡೆಯಿತು.
ಸರ್ವೋದಯ ಸಮುದಾಯ ಭವನ ಪಾರ್ಶ್ವದಲ್ಲಿ ಕಾಶೀ ಸಂತಾನ ಟ್ತಸ್ಟ್ ನೂತನ ಕಚೇರಿಯ ನಾಮ ಫಲಕವನ್ನು ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ.ಶೆಟ್ಟಿ ಅನಾವರಣಗೊಳಿಸಿದರು. ಟ್ರಸ್ಟ್ ನ ಸಂಸ್ಥಾಪಕ ವೈ .ಎಂ.ಶ್ರೀಧರ ರಾವ್ ನೂತನ ಕಚೇರಿಯಲ್ಲಿ ದೀಪ ಬೆಳಗಿಸಿದರು.
ಸಮುದಾಯ ಭವನದಲ್ಲಿ ನಡೆದ ವಿದ್ಯಾರ್ಥಿ ವೇತನ - ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಸಮುದಾಯ ಭವನದ ಅಧ್ಯಕ್ಷ ಕೆ.ಎಲ್.ಕುಂಡಂತಾಯ ದೀಪ ಬೆಳಗಿ ಉದ್ಘಾಟಿಸಿದರು.ಟ್ರಸ್ಟ್ ಅಧ್ಯಕ್ಷ ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಪುಣೆ ಉದ್ಯಮಿ ನಾರಾಯಣ ಕೆ. ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್ ಧರ್ಮದರ್ಶಿ ಜನಾರ್ದನರಾವ್ ಬೀಡು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಹಾಯಧನ ವಿತರಿಸಿದರು.
ಟ್ರಸ್ಟ್ ನ ಉಪಾಧ್ಯಕ್ಷ ಉದಯ ಭಾಸ್ಕರರಾವ್ ಸ್ವಾಗತಿಸಿದರು ,ಕಾರ್ಯದರ್ಶಿ ಸುದರ್ಶನ ವೈ .ಎಸ್. ಪ್ರಸ್ತಾವಿಸಿದರು, ಗಣೇಶ ಸಾಲಿಯಾನ್ ಕಾರ್ಯಕ್ರಮ ನಿರ್ವಹಿಸಿದರು. ರಾಕೇಶ್ ರಾವ್ ಫಲಾನುಭವಿಗಳ ಪಟ್ಟಿ ಓದಿದರು. ಆದರ್ಶ ಯುವಕ ಸಂಘದ ಅಧ್ಯಕ್ಷ ಸಂತೋಷ ಜಿ.ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.ಆದರ್ಶ ಯುವಕ ಸಂಘ ಹಾಗೂ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಕಟಪಾಡಿಯ ಜಾದುಗಾರ ಬಾಲಪ್ರತಿಭೆ ಪ್ರಥಮ್ ಕಾಮತ್ ಗೆ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ - 2021

Posted On: 07-11-2021 05:48PM
ಕಟಪಾಡಿ : ಕಾರ್ಕಳ ತಾಲೂಕು ಅಜೆಕಾರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಮಾಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಪ್ರಶಸ್ತಿಗೆ ಕಟಪಾಡಿಯ ಜಾದುಗಾರ ಬಾಲಪ್ರತಿಭೆ ಕಾಮತ್ ಆಯ್ಕೆಯಾಗಿರುತ್ತಾರೆ.
ಕಟಪಾಡಿ ಎಸ್ ವಿ ಎಸ್ ಶಾಲೆಯ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರಥಮ್ ಕಾಮತ್ ಕಟಪಾಡಿಯ ರಂಗಕರ್ಮಿ ನಾಗೇಶ್ ಕಾಮತ್ ಮತ್ತು ಸುಜಾತ ಕಾಮತ್ ಇವರ ಪುತ್ರ.
ಈ ಬಾರಿ 30 ಮಕ್ಕಳು ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಕ್ಕೆ ಪಾತ್ರರಾಗಿದ್ದಾರೆ. ನವೆಂಬರ್ 14, ಮಧ್ಯಾಹ್ನ 2 ಗಂಟೆಯಿಂದ ಅಜೆಕಾರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವ ಪ್ರದಾನಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷರಾದ ಡಾ.ಶೇಖರ ಅಜೆಕಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಧನಾಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಘವೇಂದ್ರ ಪ್ರಭು ಕವಾ೯ಲು

Posted On: 07-11-2021 02:12PM
ಉಡುಪಿ, ನ.7 : ಜೇಸಿಐ ಭಾರತ ವಲಯ 15 ರ ವ್ಯವಹಾರ ಸಮ್ಮೇಳನ 'ಉನ್ನತಿ' ಕುಂದಾಪುರ ಸಹನಾ ಕನ್ವೆಕ್ಷನ್ ನಲ್ಲಿ ಜರಗಿತು.
ಈ ಕಾಯ೯ಕ್ರಮದಲ್ಲಿ ಪೂವ೯ ವಲಯ ಉಪಾಧ್ಯಕ್ಷ , ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲುರವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದಭ೯ದಲ್ಲಿ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ರಾಷ್ಟ್ರೀಯ ನಿದೇ೯ಶಕ ಕಾತಿ೯ಕೇಯ ಮಧ್ಯಸ್ಥ, ಸಮದ್ ಖಾನ್, ದೇವರಾಯ ದೇವಾಡಿಗ, ಡಾIIವಿಜಯ್ ನೆಗಳೂರು, ಉದಯ ನಾಯ್ಕ್, ರಕ್ಷಿತ್ ವಂಡ್ಸೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ

Posted On: 07-11-2021 12:58PM
ಬೆಂಗಳೂರು : ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದ್ದು, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ.
ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ

Posted On: 07-11-2021 12:55PM
ನವೆಂಬರ್ 12 : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಕುತ್ಯಾರು ಮತ್ತು ರೋಟರಿ ಕ್ಲಬ್ ಶಿರ್ವ ಸಹಯೋಗದೊಂದಿಗೆ ಹದಿಹರೆಯದ ತಲ್ಲಣಗಳು: ಒಂದು ಶೈಕ್ಷಣಿಕ ಸಂವಾದ

Posted On: 06-11-2021 11:00PM
ಕಾಪು : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಕುತ್ಯಾರು, ಉಡುಪಿ ಮತ್ತು ರೋಟರಿ ಕ್ಲಬ್ ಶಿರ್ವ ಇವರ ಸಹಯೋಗದೊಂದಿಗೆ ನವೆಂಬರ್ 12, ಶುಕ್ರವಾರ ಅಪರಾಹ್ನ 2:15ಕ್ಕೆ ಸೂರ್ಯ ಚೈತನ್ಯ ಸಭಾಭವನದಲ್ಲಿ ಹದಿಹರೆಯದ ತಲ್ಲಣಗಳು: ಒಂದು ಶೈಕ್ಷಣಿಕ ಸಂವಾದ ಕಾರ್ಯಕ್ರಮ ಜರಗಲಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ , ಸಹಪ್ರಾಧ್ಯಾಪಕರು-ಸೈಕಾಲಜಿ ಹಾಗೂ ಸೈಕಿಯಾಟ್ರಿ ವಿಭಾಗ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೂಡುಬಿದಿರೆಯ ಡಾ. ರವಿಪ್ರಸಾದ್ ಹೆಗ್ಡೆ, ಮುಖ್ಯ ಅತಿಥಿಯಾಗಿ ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ನಾಗೇಂದ್ರಪ್ಪ ಎ. ಕೆ, ರೋಟರಿ ಕ್ಲಬ್ ಶಿರ್ವದ ಅಧ್ಯಕ್ಷರಾದ ಜಯಕೃಷ್ಣ ಆಳ್ವ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ-ಕುತ್ಯಾರು ಇಲ್ಲಿನ ಆಡಳಿತ ಮಂಡಳಿ ಅಧ್ಯಕ್ಷರಾದ ವಿದ್ವಾನ್ ಶಂಭುದಾಸ ಗುರೂಜಿ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನೂತನ ಕಚೇರಿ ಆರಂಭ

Posted On: 06-11-2021 09:31PM
ಅದಮಾರು : ನಲುವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ನಿರಂತರ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿದ್ಯಾರ್ಥಿ ವೇತನ ವಿತರಿಸುತ್ತಾ ಪ್ರಚಾರ ಬಯಸದೇ ಸಮಾಜ ಮುಖಿ ಶಿಕ್ಷಣ ಪ್ರೀತಿಯ ಕಾರ್ಯನಿರ್ವಹಿಸುತ್ತಿದ್ದ ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನ ನೂತನ ಕಾರ್ಯಾಲಯದ ಆರಂಭ ಹಾಗೂ ವಿದ್ಯಾರ್ಥಿ ವೇತನ - ಸಹಾಯಧನ ವಿತರಣಾ ಕಾರ್ಯಕ್ರಮವು 7-11-2021 ರಂದು ಸಂಜೆ ನಾಲ್ಕು ಗಂಟೆಗೆ ಅದಮಾರಿನ ಆದರ್ಶ ಯುವಕ ಸಂಘದ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಲಿದೆ.
ಪ್ರಸ್ತುತ ಅವಧಿಯಲ್ಲಿ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಮೊತ್ತವನ್ನು ವಿತರಿಸಲಾಗುವುದು.
ಕಾಶೀ ಸಂತಾನ ಟ್ರಸ್ಟ್ ನಲ್ವತ್ತು ವರ್ಷಗಳಲ್ಲಿ ಪ್ರಾಥಮಿಕ,ಪ್ರೌಢ,ಪದವಿಪೂರ್ವ,ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹತಾನುಸಾರ ವಿದ್ಯಾರ್ಥಿ ವೇತನ ವಿತರಿಸುತ್ತಿದೆ. ಸಹಾಯಧನವನ್ನು ಆರೋಗ್ಯ ಹಾಗೂ ಅಗತ್ಯವಿರುವ ಬಡವರಿಗೆ ಕೊಡುತ್ತಿದೆ. ಮುಂದಿನ ವರ್ಷದಿಂದ ಎರಡು ಲಕ್ಷ ರೂಪಾಯಿ ಮೊತ್ತವನ್ಮು ವಿತರಿಸಲಾಗುವುದು.
ಅದಮಾರಿನ ಸರ್ವೋದಯ ಸಮುದಾಯ ಭವನದ ಪಾರ್ಶ್ವದಲ್ಲಿ ಕಾಶೀಸಂತಾನ ಟ್ರಸ್ಟ್ ನ ನೂತನ ಕಚೇರಿ ಇದೆ. ನಿವೃತ್ತ ಶಿಕ್ಷಕ ವೈ.ಎಂ.ಶ್ರೀಧರ ರಾವ್ ಕಾಶೀ ಸಂತಾನ ಟ್ರಸ್ಟ್ ನ ಸಂಸ್ಥಾಪಕರು. ಟ್ರಸ್ಟ್ ನ ಕಾರ್ಯಗಳನ್ಮು ನಿಷ್ಠೆ ಹಾಗೂ ಶ್ರದ್ಧೆಯಿಂದ ನಿರ್ವಹಿಸುತ್ತಾ ಬಂದವರು, ಇವರು ಉಪಸ್ಥಿತರಿದ್ದು ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಿಸಲಿರುವರು. ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ ,ಪುಣೆ ಉದ್ಯಮಿ ನಾರಾಯಣ ಕೆ.ಶೆಟ್ಟಿ ಹಾಗೂ ಸಮುದಾಯ ಭವನದ ಅಧ್ಯಕ್ಷ ಕೆ.ಎಲ್.ಕುಂಡಂತಾಯ ಅತಿಥಿಗಳಾಗಿರುವರು ಎಂದು ಟ್ರಸ್ಟ್ ನ ಅಧ್ಯಕ್ಷ ವಿಜಯ ಕುಮಾರ ವೈ ಹಾಗೂ ಕಾರ್ಯದರ್ಶಿ ಸುದರ್ಶನ ವೈ.ಎಸ್. ತಿಳಿಸಿದ್ದಾರೆ.
ನೀತಾ ಪ್ರಭು ತಂಡದಿಂದ ಅಪ್ಪ ಅಮ್ಮ ಅನಾಥಾಲಯದ ಆಶ್ರಮವಾಸಿಗಳೊಂದಿಗೆ ದೀಪಾವಳಿ ಆಚರಣೆ

Posted On: 06-11-2021 07:09PM
ಉಡುಪಿ : ನೀತಾ ಪ್ರಭು ಮತ್ತು ತಂಡದಿಂದ ದೀಪಾವಳಿಯ ಪ್ರಯುಕ್ತ ಬ್ರಹ್ಮಾವರದ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಇವರ ಅಪ್ಪ ಅಮ್ಮಅನಾಥಾಲಯ(ಉಚಿತ ಸೇವೆ)ಕ್ಕೆ ಭೇಟಿ ನೀಡಿದರು.

ಈ ಸಂದರ್ಭ ಅನಾಥಾಲಯದ ಆಶ್ರಮವಾಸಿಗಳಿಗೆ ಹೊಸ ಬಟ್ಟೆ, ಸಿಹಿಯನ್ನು ವಿತರಿಸಿ ದೀಪಾವಳಿಯನ್ನು ಆಚರಿಸಲಾಯಿತು.
ಐಡಿಯಲ್ ಐಸ್ ಕ್ರೀಮ್ ಮಾಲಕ ಪ್ರಭಾಕರ್ ಕಾಮತ್ ವಿಧಿವಶ

Posted On: 06-11-2021 01:15PM
ಮಂಗಳೂರು : ಐಸ್ ಕ್ರೀಮ್ ಕಂಪನಿಗಳಲ್ಲಿ ಅತಿ ಹೆಚ್ಚು ಪ್ರಸಿದ್ಧ ಆದ ಕಂಪನಿ ಆಂದ್ರೆ ಐಡಿಯಲ್. ಇದರ ಸ್ಥಾಪಕರಾದ ಪ್ರಭಾಕರ್ ಕಾಮತ್ ಇವರು ವಿಧಿವಶರಾಗಿದ್ದಾರೆ.
ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಡಂಬುವಿನಲ್ಲಿ ರಾರಾಜಿಸಿದ ಕೇಸರಿ ಗೂಡುದೀಪ

Posted On: 06-11-2021 10:33AM
ಕಾಪು : ಶಿರ್ವದ ಕಡಂಬುವಿನಲ್ಲಿ ಬೃಹತ್ ಗಾತ್ರದ ಗೂಡುದೀಪವೊಂದು ಸಾರ್ವಜನಿಕರ ಗಮನಸೆಳೆದಿದೆ.
ಕಳೆದ ಎರಡು ವರ್ಷಗಳಿಂದ ದೀಪಾವಳಿಯ ಸಂದರ್ಭ ಗೂಡುದೀಪವನ್ನು ಅಳವಡಿಸಲಾಗುತ್ತಿದ್ದು ಸಂಪೂರ್ಣ ಕೇಸರಿ ಬಟ್ಟೆಯಿಂದಲೇ ಕಾರ್ಯಕರ್ತರೆ ತಯಾರಿಸಿದ್ದಾಗಿದೆ.
ಇದರ ವಿಶೇಷತೆಯೇನೆಂದರೆ 26 ಅಡಿ ಎತ್ತರದಲ್ಲಿದ್ದು 10 ಫಿಟ್ ಗಿಂತ ಉದ್ದವಾಗಿದೆ.