ಕಲ್ಯಾಣಪುರ ರೋಟರಿ ಕ್ಲಬ್ : ಕುಟುಂಬ ಸಮ್ಮಿಲನ, ಸೌಹಾರ್ದ ಕೂಟ, ಸನ್ಮಾನ
Thumbnail
ಉಡುಪಿ : ಕಲ್ಯಾಣಪುರ ರೋಟರಿ ಕ್ಲಬ್ ನ ಸದಸ್ಯರ ಕುಟುಂಬ ಸಮ್ಮಿಲನ ಮತ್ತು ಸೌಹಾರ್ದ ಕೂಟ ನೆರವೇರಿತು. ಈಬಸಂದರ್ಭ ಸದಸ್ಯರಾದ ವಿಜಯ ಮಯ್ಯಾಡಿ ಇವರ ಹುಟ್ಟು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಅಮೃತ್ ಗಾರ್ಡನ್ ಸಭಾಂಗಣದಲ್ಲಿ ಜರುಗಿದ ಈ ಸಮಾರಂಭದಲ್ಲಿ ಹವ್ಯಾಸಿ ರಕ್ತ ದಾನಿಯಾದ ದೀಕ್ಷಿತ್ ಪ್ರಭುರವರ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಸನ್ಮಾನಿಸಲಾಯಿತು. ರೊಟರಾಕ್ಟ್ ಮಣಿಪಾಲದ ನೂತನ ಅಧ್ಯಕ್ಷರಾದ ಗ್ಲೆನ್ ಡಯಾಸ್ ರವರನ್ನು ಅಭಿನಂದಿಸಲಾಯಿತು. ಕಲ್ಯಾಣಪುರ ರೋಟರಿಯ ಸದಸ್ಯರು ಆದ, ಅಂತಾರಾಷ್ಟ್ರೀಯ ಸಾಧನೆ ಮಾಡಿದ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜರಾಮ ಭಟ್, Indian Dental Association Manglore ಚಾರ್ಟರ್ ನ ನೂತನ ಅಧ್ಯಕ್ಷರಾದ ಡಾ.ರೋಶನ್ ಶೆಟ್ಟಿ, ಮುದ್ರಣ ಸಂಸ್ಥೆಗಳ ಮಾಲೀಕರ ಸಂಘದ ರಾಜ್ಯ ಸಂಚಾಲಕರಾಗಿ ಆಯ್ಕೆ ಆದ ಮಹೇಶ್ ಕುಮಾರ್, ಡಾಕ್ಟರೇಟ್ ಪದವಿ ಪಡೆದ ಡಾ.ಮೇವಿ ಮಿರಾಂಡಾ ರವರು ಗಳನ್ನೂ ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ರೋಟರಿ ಕ್ಲಬ್ ನ ಅಧ್ಯಕ್ಷ ಶಂಭು ಶಂಕರ್, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
Additional image Additional image Additional image
02 Jan 2022, 11:43 AM
Category: Kaup
Tags: