ಶಿರ್ವ : ಉಚಿತ ಹೃದಯ ತಪಾಸಣಾ ಶಿಬಿರ
ಶಿರ್ವ : ಶಿವ೯ದಲ್ಲಿ , ಪ್ರಸ್ತುತ ಆರೋಗ್ಯ ಸಂಬಂಧಿ ವಿಚಾರದಲ್ಲಿ ಸದಾ ಎಚ್ಚರಿಕೆಯಿಂದ ಇರುವ ಅನಿವಾಯ೯ತೆ ಮತ್ತು ಅಗತ್ಯತೆ ಇಂದುನಮ್ಮ ಮುಂದಿದೆ. ಇಂದಿನ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ಅಬಾಲ ವೃದ್ಧರಾದಿಯಾಗಿ ಸಾವು ಸಂಭವಿಸುತ್ತದೆ ಈ ನಿಟ್ಟಿನಲ್ಲಿ ಸೂಕ್ತ ಸಮಯದಲ್ಲಿ ಆರೋಗ್ಯ ವಂತ ಜನರು ಕೂಡ ತಮ್ಮ ಆರೋಗ್ಯವನ್ನು ತಜ್ಞ ವೈದ್ಯರಿಂದ ಸಕಾಲದಲ್ಲಿ ಪರೀಕ್ಷಿಸಿ ಹೃದಯದ ರೋಗಗಳಿಂದ ತಮ್ಮನ್ನು ರಕ್ಷಣೆ ಮಾಡಿಸಿಕೊಳ್ಳುವುದು ಬಹಳ ಮಹತ್ವದ ವಿಚಾರವಾಗಿದೆ ಎಂದು ಲಯನ್ಸ್ ಕ್ಲಬ್ ಶಿವ೯, ಸಂತ ಮೇರಿ ಮಹಾವಿದ್ಯಾಲಯ ಶಿವ೯,ಸಂತ ಮೇರಿ ಪಿಯು ಕಾಲೇಜು ಹಳೆವಿದ್ಯಾಥಿ೯ ಸಂಘ,ಸ್ತೃೀ ಸಂಘಟನೆ ಶಿವ೯,ಕಸ್ತೂರಬಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ , ಮಣಿಪಾಲ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಹೃದಯ ತಪಾಸಣಾ ಕಾಯ೯ಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಧರ್ಮ ಗುರುಗಳು ಅಲೆಕ್ಸಾಂಡರ್ ಡೆನಿಸ್ ಡೇಸಾರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.
ಕೆ ಎಂಸಿ ಮಣಿಪಾಲ ಇಲ್ಲಿಯ ವೈದ್ಯರಾದ ಡಾ. ಗೋಸಾವಿ ಸಿದ್ಧಾಥ್೯ ಹೃದಯ ತಪಾಸಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮೆಲ್ವಿನ್ ನೊರೊನ್ನ, ಪಿಯು ಸಂತಮೇರಿ ಕಾಲೇಜು ಹಳೆವಿದ್ಯಾಥಿ೯ ಸಂಘ ಅಧ್ಯಕ್ಷ ರು, ಜಾಜ್೯ ಅನಿಲ್ ಡಿ'ಸೋಜ ಅಧ್ಯಕ್ಷರು ಲಯನ್ಸ್ ಕ್ಲಬ್ ಶಿವ೯, ಜ್ಯೋತಿ ಡಿ'ಸೋಜ ,ಅಧ್ಯಕ್ಷರು ಸ್ತ್ರಿಸಂಘಟನೆ ಶಿವ೯, ಮಥಾಯಸ್ ಲೋಬೊ ಕಾಯ೯ದಶಿ೯ ಪಿಯು ಕಾಲೇಜು ಹಳೆವಿದ್ಯಾಥಿ೯ ಸಂಘ,ಶಿವ೯ ಕಾಲೇಜಿನ ಕ್ಷೇಮಪಾಲನಾ ಅಧಿಕಾರಿ ಯಶೋಧ , ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್, ಎನ್ಎಸ್ಎಸ್ ಅಧಿಕಾರಿಗಳಾದ ಪ್ರೇಮನಾಥ್ ಕೋಟ್ಯಾನ್,ರಕ್ಷಾ , ರೋವರ್ಸ್ ರೇಂಜರ್ಸ್ ಲೀಡರ್ ಗಳಾದ ಪ್ರಕಾಶ್, ಸಂಗೀತ ಪೂಜಾರಿ, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕ ವಿಠ್ಠಲ್ ನಾಯಕ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಬೆಳಿಗ್ಗೆ 9 ರಿಂದ ಮಧ್ಯಾಹ್ನ ಒಂದರ ತನಕ ಸುಮಾರು 80 ಜನರು ಶಿಬಿರದ ಪ್ರಯೋಜವನ್ನು ತಮ್ಮ ಆರೋಗ್ಯತಪಾಸಣೆ ಮಾಡುವ ಮೂಲಕ ಪಡೆದುಕೊಂಡರು. ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತ , ಕಂಪನಿ ಸಾರ್ಜೆಂಟ್ ಕ್ವಾಟರ್ಮಸ್ಟರ್ ಮೋಹಿತ್ ಎನ್ ಸಾಲಿಯಾನ್, ಕಾರ್ಪೊರಲ್ ಧೀರಜ್ ಆಚಾರ್ಯ, ಎನ್‌ಎಸ್‌ಎಸ್ ಸ್ವಯಂಸೇವಕರಾದ ವೈಷ್ಣವಿ, ಮಿನಾಜ್, ಸಿಂಚನಾ, ಶ್ರೇಯಸ್, ಮೊಹಮ್ಮದ್ ಅಫ್ನಾನ್, ರೋವರ್ ಸ್ವಯಂಸೇವಕರಾದ ಡಾರಿಲ್ ಮತ್ತು ಕಾಲೇಜಿನ ಆಡಳಿತ ಸಿಬ್ಬಂದಿ ವರ್ಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿದರು.
ಸಂತಮೇರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನಿಸ್ ರವರು ಸವ೯ರನ್ನು ಸ್ವಾಗತಿಸಿ, ಚಾಲ್ಸ೯ ಮೋಹನ್ ನೊರೊನ್ಹ ಲಯನ್ಸ್ ಕ್ಲಬ್ ಶಿವ೯ ವಂದಿಸಿ, ನೋಬ೯ಟ್೯ ಮಚಾದೊ ಮಾಜಿ ಅಧ್ಯಕ್ಷರು ಲಯನ್ಸ್ ಕ್ಲಬ್ ಶಿವ೯ ಕಾರ್ಯಕ್ರಮ ನಿರೂಪಿಸಿದರು.
