ಸಾಲದ ಹೊರೆ : ಯುವಕ ಆತ್ಮಹತ್ಯೆ
Thumbnail
ಮುಲ್ಕಿ : ಸಾಲದ ಹೊರೆಯಿಂದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಯುವಕನೋರ್ವ ಕೆಲಸದ ಸಂದರ್ಭ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸನ್ ರೈಸ್ ಕಾರ್ಪೋರೇಷನ್ ಕುಳಾಯಿ ಇಲ್ಲಿ ಉದ್ಯೋಗಿಯಾಗಿದ್ದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಸುಶಾಂತ್ (26) ಎಂಬಾತ ಆನ್ ಲೈನ್ ಸಾಲದ ಹೊರೆಯಿಂದ ಅದನ್ನು ಪಾವತಿಸಲಾಗದೆ ಕೆಲಸದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಯವಿಟ್ಟು ಕ್ಷಮಿಸಿ ನನಗೆ ಯಾರ ನಂಬಿಕೆಯನ್ನು ಉಳಿಸಲಾಗಲಿಲ್ಲ. ಹಣದ ವಿಷಯದಲ್ಲಿ ತೊಂದರೆಯಾಗಿದೆ. ಆನ್ ಲೈನ್ ಸಾಲದವರು ಕರೆ ಮಾಡಿದರೆ ನಿಧನನಾಗಿದ್ದಾನೆ ಎಂದು ತಿಳಿಸಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಶರಣಾಗಿದ್ದಾನೆ.
10 Jan 2022, 04:59 PM
Category: Kaup
Tags: