ಕಾಪು ಕುಲಾಲ ಯುವ ವೇದಿಕೆ ವತಿಯಿಂದ ಚಿಕಿತ್ಸೆಗೆ ನೆರವು
Thumbnail
ಕಾಪು : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾಪುವಿನ ಸಾಂತೂರು ಗ್ರಾಮದ ಕಾಂಜರಕಟ್ಟೆಯಲ್ಲಿ ವಾಸವಾಗಿರುವ ಯೋಗೀಶ್ ಕುಲಾಲ್ ಅವರ ಚಿಕಿತ್ಸೆಗೆ ಸಹಾಯ ಮಾಡುವಂತೆ ಅನೇಕ ವಾಟ್ಸಪ್ ಗ್ರೂಪ್ನಲ್ಲಿ ಹಂಚಿ ನೆರವಿಗಾಗಿ ವಿನಂತಿ ಮಾಡಲಾಗಿತ್ತು. ಈ ಮಾಹಿತಿಗೆ ತಕ್ಷಣ ಸ್ಪಂದಿಸಿದ ಕಾಪು ಕುಲಾಲ ಯುವ ವೇದಿಕೆ ನಿಕಟ ಪೂರ್ವ ಅಧ್ಯಕ್ಷರು ಉದಯ ಕುಲಾಲ್ ನೆರವಿನ ಸಹಾಯದ ಜವಾಬ್ದಾರಿ ಹೊತ್ತು ಈ ನಿಮಿತ್ತ ಸಹೃದಯಿ ದಾನಿಗಳ ಬೆಂಬಲದಿಂದ ಒಟ್ಟುಗೂಡಿದ ಸಹಾಯ ಧನವನ್ನು ಮಂಗಳವಾರ ಮಣಿಪಾಲ ಆಸ್ಪತ್ರೆಗೆ ತೆರಳಿ ನೀಡಲಾಯಿತು. ಹನಿಗೂಡಿ ಹಳ್ಳ ಅನ್ನುವಂತೆ ದಾನಿಗಳಿಂದ ಸಂಗ್ರಹಿಸಿದ ಸಹಾಯಧನ ಒಟ್ಟು ರೂ. 29,700 ಅವರಿಗೆ ನೀಡಲಾಯಿತು. ಹಣ ಹಸ್ತಾಂತರ ಸಂದರ್ಭ ಶಂಕರ್ ಕುಲಾಲ್ ಪೆರಂಪಳ್ಳಿ, ಸುನಿಲ್ ಎಸ್ ಮೂಲ್ಯ, ಸುಮಂತ್ ಕುಲಾಲ್ ಪಾದೂರು, ಪ್ರಭಾಕರ್ ಇನ್ನ, ಉದಯ ಕುಲಾಲ್ ಉಪಸ್ಥಿತರಿದ್ದರು.. ಸಕಾಲದಲ್ಲಿ ನೆರವು ನೀಡಿ ಸಹಕರಿಸಿದ ಎಲ್ಲಾ ಸಹೃದಯಿ ಬಾಂಧವರಿಗೆ ಕಾಪು ಕುಲಾಲ ಯುವ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಬಡವರ ಕಣ್ಣೀರು ಒರೆಸುವ ಕಾಪು ಕುಲಾಲ ಯುವ ವೇದಿಕೆಯ ಸೇವಾ ಕಾರ್ಯಕ್ಕೆ ಶ್ಲಾಘನೆಗೆ ಪಾತ್ರವಾಯಿತು. ನೆರವು ನೀಡಲು ಇಚ್ಛಿಸುವವರಿಗೆ ಯೋಗೀಶ್ ಕುಲಾಲ್ ಅವರ ಬ್ಯಾಂಕ್ ಅಕೌಂಟ್ ಮಾಹಿತಿ : Name :Yogish Bangera A/c No:026922010000117 IFSC CODE :UBINO902691 Bank:Union Bank Of India Branch :nandikooru Google pay:6361693202(Yogish bangera )
12 Jan 2022, 12:03 PM
Category: Kaup
Tags: