ಆದಿಶಕ್ತಿ ಮಹಿಳಾ ಸಹಕಾರಿ ಸಂಘ ಮೂಡುಸಗ್ರಿ, ಉಡುಪಿ ವತಿಯಿಂದ ಸುಮಾ ನಾಯ್ಕ್ ರಿಗೆ ಸನ್ಮಾನ
Thumbnail
ಉಡುಪಿ : ಆದಿಶಕ್ತಿ ಮಹಿಳಾ ಸಹಕಾರಿ ಸಂಘ ಮೂಡುಸಗ್ರಿ ಉಡುಪಿ ಇದರ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ನಗರ ಪ್ರಾಧಿಕಾರದ ಸದಸ್ಯರಾದ ಸುಮಾ ನಾಯ್ಕ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರಾದ ಉಡುಪಿ ಬಬ್ಬರ್ಯಯುವ ಸೇವ ಸಮಿತಿ ಗೌರವಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ನೆರವೇರಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಗೀತಾ ಎಸ್ ಭಟ್, ಸುಲೋಚನ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಪೂರ್ಣಿಮಾ, ಮಾಲತಿ, ವಸಂತಿ, ಪುಷ್ಪ, ಸುನಿತಾ, ವಿದ್ಯಾಶ್ರೀ, ಸುಗಂಧಿ, ಜ್ಯೋತಿ, ಶಶಿಕಲಾ, ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಪ್ರಿಯ ಸ್ವಾಗತಿಸಿದರು. ಆಶಾ ವಂದಿಸಿದರು.
Additional image
12 Jan 2022, 04:24 PM
Category: Kaup
Tags: