ಮದುವೆಯ ವಾಹನದಂತೆ ಸಿಂಗರಿಸಿ ಗೋವುಗಳ ಅಕ್ರಮ ಸಾಗಾಟ ; 16 ಗೋವುಗಳ ರಕ್ಷಣೆ
Thumbnail
ಕಾಪು : ಬಜರಂಗದಳ ಮತ್ತು ಕಾಪು-ಶಿರ್ವ ಪೋಲೀಸರ ಕಾರ್ಯಾಚರಣೆಯಲ್ಲಿ ಇನ್ನೋವ ಕಾರು ಮತ್ತು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಕದ್ದೊಯ್ಯುತ್ತಿದ್ದ 16 ಗೋವುಗಳ ರಕ್ಷಣೆ ಮಾಡಲಾಗಿದೆ. ಈ ಸಂದರ್ಭ ಎರಡು ದನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಪೋಲೀಸರ ಮತ್ತು ಹಿಂದೂ ಕಾರ್ಯಕರ್ತರ ಕಣ್ಣು ತಪ್ಪಿಸಲು ಗೋ ಕಳ್ಳತನದ ವಾಹನವನ್ನು ಮದುವೆಯ ವಾಹನದಂತೆ ಸಿಂಗರಿಸಲಾಗಿತ್ತು. ಅತಿ ವೇಗವಾಗಿ ಚಲಾಯಿಸುತ್ತಿದ್ದ ಇನ್ನೋವ ಮತ್ತು ಪಿಕಪ್ ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಮ್ಮ ವಾಹನಗಳನ್ನು ಅಡ್ಡ ಇಟ್ಟು ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು.
Additional image Additional image
12 Jan 2022, 05:06 PM
Category: Kaup
Tags: