25 ಸಾವಿರ ಮೌಲ್ಯದ ಹಸುವೊಂದನ್ನು ಯಶೋಧ ಆಚಾರ್ಯರಿಗೆ ನೀಡಿದ ದಾನಿಗಳು
Thumbnail
ಕಾರ್ಕಳ : ಕಾರ್ಕಳ ಮಿಯಾರು ಕಜೆ ಎಂಬಲ್ಲಿಯ ಯಶೋಧ ಆಚಾರ್ಯ ಕುಟುಂಬಕ್ಕೆ ಸೇರಿದ 16 ಗೋವುಗಳನ್ನು ಒಂದುವರೆ ವರುಷದ ಅವಧಿಯಲ್ಲಿ ಗೋ ಕಳ್ಳರು ಕದ್ದೊಯ್ದಿದ್ದು, ಸಂಕಷ್ಟದಲ್ಲಿರುವ ಮಹಿಳೆಯ ಕುಟುಂಬಕ್ಕೆ ಸ್ಪಂದಿಸಿ ಹಲವರು ಗೋವು,ಮೇವುಗಳನ್ನು ನೀಡಿ ಸ್ಪಂದಿಸುತ್ತಿದ್ದಾರೆ. ಗುರುವಾರ ಕಾಪು ತಾಲೂಕು ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಆಚಾರ್ಯ ಓಂ ಸಾಯಿ ಪಾಂಗಾಳ ಅವರು ಸುಮಾರು 25 ಸಾವಿರ ಕ್ರಯದ ಹಸುವೊಂದನ್ನು ದಾನವಾಗಿ ನೀಡಿದರು. ಜತೆಗೆ ಮೇವು, ಹಿಂಡಿಗಳನ್ನು ನೀಡಿ ಸಹಕರಿಸಿದರು. ಗೋವುಗಳನ್ನೇ ಆಧಾರವಾಗಿರಿಸಿಕೊಂಡು ಬದುಕು ಕಟ್ಟಿಕೊಂಡ ಬಡ ಮಹಿಳೆ ಗೋವುಗಳನ್ನು ಕಳೆದುಕೊಂಡು ತೀರಾ ಸಂಕಷ್ಟದಲ್ಲಿದೆ. ಇಂತಹ ಕುಟುಂಬಕ್ಕೆ ನೆರವು ನೀಡುವಲ್ಲಿ ನಾವೆಲ್ಲರು ಕೈ ಜೋಡಿಸಬೇಕಿದೆ ಎಂದು ಹೇಳಿ ಹಾರೈಸಿದರು. ಈ ಸಂದರ್ಭ ಪ್ರವೀಣ್ ಶೆಟ್ಟಿ ಕಾರ್ಕಳ, ರಾಘವೇಂದ್ರ ಅಮೀನ್, ಅಜಿತ್ ಮೆಂಡನ್, ಪ್ರಸಾದ್ ಪೂಜಾರಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು ಮೊದಲಾದವರು ಉಪಸ್ಥಿತರಿದ್ದರು.
12 Jan 2022, 07:47 PM
Category: Kaup
Tags: