ಉಡುಪಿ : ರಾಷ್ಟ್ರೀಯ ಯುವ ದಿನಾಚರಣೆ
Thumbnail
ಉಡುಪಿ :- ಸ್ವಾಮಿ ವಿವೇಕಾನಂದರ ಆದಶ೯ಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ .ಮನೋಬಲ, ದೇಹಬಲ ಅದೇ ರೀತಿ ಶಿಸ್ತು ಅವಕಾಶ ಹಾಗೂ ಸೇವಾ ಮನೋಭಾವ ಗಳ ಬಗ್ಗೆ ಸ್ವಾಮೀಜಿಯವರು ನಮಗೆ ಹೇಳಿದ್ದಾರೆ ಅದನ್ನು ಅಳವಡಿಸಿಕೊಳ್ಳಿ ಎಂದು ಜೇಸಿಐ ಉಡುಪಿ ಸಿಟಿ ಅಧ್ಯಕ್ಷ ಡಾII ವಿಜಯ್ ನೆಗಳೂರು ಹೇಳಿದರು. ಅವರು ಜನವರಿ 12 ರಂದು ಕ್ರಿಶ್ಚಿಯನ್ ಪ.ಪೂ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನ ಸ್ವಾಮಿ ವಿವೇಕಾನಂದ ಜಯಂತಿ ಕಾಯ೯ಕ್ರಮದಲ್ಲಿ ಮಾತನಾಡಿದರು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್ ವಹಿಸಿದ್ದರು. ಈ ಸಂದಭ೯ದಲ್ಲಿ ವಿದ್ಯಾಥಿ೯ಗಳಿಗೆ ಭಾಷಣ ಸ್ಪರ್ಧೆ ನಡೆಯಿತು. ವೇದಿಕೆಯಲ್ಲಿ ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು ಕವಾ೯ಲು, ಕಿರಣ್ ಭಟ್, ಸಂದೀಪ್ ಕುಮಾರ್, ವೀಕ್ಷಿತ್ ಪೂಜಾರಿ, ಡಾII ಸಮದುಡು ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ನಾಗರಾಜ್ ನಿರೂಪಿಸಿ, ವಂದಿಸಿದರು.
12 Jan 2022, 08:59 PM
Category: Kaup
Tags: