ಕಾಪು : ಕೊರೊನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರಡಿಸಿದ ಲಾಕ್ಡೌನ್ ನಿಂದಾಗಿ ಅದೆಷ್ಟೋ ಜನರು ತತ್ತರಿಸುತ್ತಿದ್ದಾರೆ.
ದಿನಗೂಲಿ ಮಾಡುವವರು ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ, ಈ ಒಂದು ಸಮಯದಲ್ಲಿ ಯಾವುದೇ ಪ್ರಚಾರ ಬಯಸದೆ ಯಾರು ಹಸಿವಿನಿಂದ ನರಳುವಂತಾಗಬಾರದು ಎಂದು ಕಳೆದ ಹನ್ನೊಂದು ದಿನಗಳಿಂದ ಕಾಪುವಿನ ಮಡುಂಬು ಎಂಬಲ್ಲಿ ದಂಪತಿಗಳಿಬ್ಬರು ಸಾವಿರಾರು ಜನಕ್ಕೆ ಅನ್ನದಾನ ಮಾಡುತ್ತಿದ್ದಾರೆ. ಅವರೇ ಶ್ರೀ ವಿದ್ವಾನ್ ಕೆ.ಪಿ. ಶ್ರೀನಿವಾಸ್ ತಂತ್ರಿ ಮಡುಂಬು ಮತ್ತು ದೀಕ್ಷಾ ತಂತ್ರಿ ದಂಪತಿಗಳು.
ಮಡುಂಬು ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ ಇನ್ನಂಜೆ, ಪಾಂಗಾಳ, ಮಂಡೇಡಿ, ಮಲ್ಲಾರ್ ಸೇರಿದಂತೆ ಇನ್ನು ಅನೇಕ ಕಡೆಗಳಿಗೆ ಆಹಾರವನ್ನು ತಲುಪಿಸುತ್ತಿದ್ದಾರೆ. ಈ ಒಂದು ಕಾರ್ಯಕ್ಕೆ ಗ್ರಾಮಸ್ಥರು ಆಹಾರ ಪ್ಯಾಕ್ ಮಾಡಲು ಸಹಕರಿಸುತ್ತಿದ್ದಾರೆ ಹಾಗೂ ಇನ್ನಂಜೆ ಗ್ರಾಮ ಪಂಚಾಯತ್ನ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ ಮತ್ತು ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು ಇವರು ಕೂಡ ಕೈ ಜೋಡಿಸಿದ್ದಾರೆ .