ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳು ಕೊರೊನ ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು, ಕೈಪುಂಜಾಲು, ಕೊರಂಗ್ರಪಾಡಿ, ಪಿತ್ರೋಡಿ, ಶಂಕರಪುರ, ಇನ್ನಂಜೆ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಇರುವ ರಿಕ್ಷಾ ಚಾಲಕರನ್ನು ಗುರುತಿಸಿ. 160 ರಿಕ್ಷಾ ಚಾಲಕರ ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಕಾಪು, ಶಂಕರಪುರ ಭಾಗದಲ್ಲಿ ಇಂದು ವಿತರಣೆ ಮಾಡಿದ್ದು, ಉದ್ಯಾವರ ಭಾಗದಲ್ಲಿ ನಾಳೆ ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು, ಸುನೀಲ್, ವರುಣ್, ದೀಪಕ್,ಪೃಥ್ವಿರಾಜ್ ಮತ್ತು ಕಾರ್ತಿಕ್ ಶೆಟ್ಟಿ ಉಪಸ್ಥಿತರಿದ್ದರು.