ಇನ್ನಂಜೆ, ಎ. 16 : ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾಂಪ್ರತಿ ನಡೆಯುವ ಉತ್ಸವಾದಿ ಕಾರ್ಯಗಳು ಕೊರೊನ ಲಾಕ್ಡೌನ್ ನಿಮಿತ್ತ ಶಾಸ್ತ್ರೋಕ್ತವಾಗಿ ನಡೆಯುತ್ತಿವೆ.
ಉತ್ಸವದ ಎರಡನೇ ದಿನವಾದ ಇಂದು ಶ್ರೀ ದೇವರಿಗೆ ಅಭಿಷೇಕ ಮತ್ತು ಉತ್ಸವದ ಅಂಗವಾಗಿ ನಡೆಯುವ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ಮದ್ಯಾಹ್ನ ಶ್ರೀ ದೇವಳದ ಅನ್ನಛತ್ರದಲ್ಲಿ 750 ಜನರಿಗೆ ಬೇಕಾಗುವಷ್ಟು ಅನ್ನ, ಸಾರು, ಪಲ್ಯ, ಬಕ್ಶ್ಯ, ಪಾಯಸವನ್ನು ತಯಾರಿಸಿದ್ದು. ಪ್ರತಿನಿತ್ಯ ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳವರ ಮನೆಯಲ್ಲಿ ಊಟ ತಯಾರುಗುತ್ತಿದ್ದು ಈ ದಿನ ದೇವಳದ ವತಿಯಿಂದ ಮಾಡಲಾಗುವುದು ಎಂದು ನಿರ್ಧರಿಸಲಾಗಿತ್ತು ಇದಕ್ಕೆ ತಂತ್ರಿಗಳು ಸಂತೋಷದಿಂದ ಒಪ್ಪಿಕೊಂಡಿದ್ದು ಅವರು ಕೂಡ ಉಪಸ್ಥಿತರಿದ್ದರು. ಆಡಳಿತ ವರ್ಗ, ಪೊಲೀಸ್ ಸಿಬ್ಬಂದಿಗಳು ಕೂಡ ಉಪಸ್ಥಿತರಿದ್ದರು.
ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ, ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು ಮತ್ತು ಪಂಚಾಯತ್ ಸಿಬ್ಬಂದಿಗಳು ತಯಾರಿಸಿದ ಆಹಾರವನ್ನು ಹಂಚುವ ಕಾರ್ಯವನ್ನು ಮಾಡಿದರು.