ಇನ್ನಂಜೆ, ಎ. 17 : ಇನ್ನಂಜೆ ಭಾಗದಲ್ಲಿ ಲಾಕ್ಡೌನ್ ಶುರುವಾದ ದಿನದಿಂದ 15,000 ಊಟ ವಿತರಣೆ
ಮಡುಂಬು ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಅನ್ನದಾನ ಮಾಡುತ್ತಿದ್ದು ಇದುವರೆಗೂ 15 ಸಾವಿರಕ್ಕೂ ಮಿಕ್ಕಿ ಆಹಾರ ತಯಾರಿಸಿ ಜನರಿಗೆ ಹಂಚಿದ್ದಾರೆ, ಇನ್ನಂಜೆ ಗ್ರಾಮದ ಮಡುಂಬು, ಮಂಡೇಡಿ, ಇನ್ನಂಜೆ, ಪಾಂಗಾಳ ಮತ್ತು ರಣಕೇರಿ, ಮಲ್ಲಾರ್ ಹಾಗೂ ಕಾರ್ಕಳ ತಾಲೂಕಿಗೂ ಕೂಡ ಪ್ರತಿನಿತ್ಯ 150 ಆಹಾರ ವಿತರಣೆಯಾಗುತ್ತಿದೆ.
ಇಂದು ಉದ್ಯಾವರ ಭಾಗದ 80 ರಿಕ್ಷಾ ಚಾಲಕರ ಕುಟುಂಬಕ್ಕೆ 15 ದಿನಗಳಿಗೆ ಬೇಕಾಗುವಷ್ಟು ದೈನಂದಿನ ಬಳಕೆಯ ಆಹಾರ ಸಾಮಗ್ರಿ ವಿತರಣೆ.
ಅನ್ನದಾನದ ನಡುವೆ ರಿಕ್ಷಾ ಚಾಲಕರು ಪಡುತ್ತಿರುವ ಕಷ್ಟವನ್ನು ಗಮನಿಸಿ 160ಕ್ಕೂ ಹೆಚ್ಚಿನ ರಿಕ್ಷಾ ಚಾಲಕರ ಕುಟುಂಬಕ್ಕೆ ದೈನಂದಿನ ಬಳಕೆಯ ಆಹಾರ ಸಾಮಗ್ರಿಯನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದ್ದರು.. ನಿನ್ನೆ ಕಾಪು,ಕೈಪುಂಜಾಲು, ಶಂಕರಪುರ ಭಾಗದಲ್ಲಿ 100 ರಿಕ್ಷಾ ಚಾಲಕರ ಕುಟುಂಬಕ್ಕೆ ವಿತರಣೆ ಮಾಡಿದ್ದು ಇಂದು ಉದ್ಯಾವರದ ಕೊರಂಗ್ರಪಾಡಿ ಮತ್ತು ಪಿತ್ರೋಡಿಯಲ್ಲಿ ಸರಿಸುಮಾರು 80 ರಿಕ್ಷಾ ಚಾಲಕರ ಕುಟುಂಬಕ್ಕೆ 15 ದಿನಗಳಿಗೆ ಬೇಕಾಗುವಷ್ಟು ದಿನ ಬಳಕೆಯ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಇಂದು ಮಧ್ಯಾಹ್ನ ಕಾಪು ಭಾಗದ ಸುಮಾರು 25 ವಲಸೆ ಕಾರ್ಮಿಕರು ಇವರ ಮನೆಗೆ ಬಂದಿದ್ದು ಅವರಿಗೂ ಕೂಡ ದಿನ ಬಳಕೆಯ ಸಾಮಗ್ರಿಗಳನ್ನು ಒದಗಿಸಿದರು..
ಇಂದು ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಕಟಪಾಡಿ ಮತ್ತು ಕಾಪು ವಲಯದ ಉದಯವಾಣಿ ವರದಿಗಾರರಾದ ರಾಕೇಶ್ ಕುಂಜೂರು ಭೇಟಿ ನಿಡಿ ಇವರು ಮಾಡುತ್ತಿರುವ ದಾನಧರ್ಮಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ದೀಕ್ಷಾ ತಂತ್ರಿ, ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ, ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು, ಇನ್ನಂಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸ್ಥಳೀಯರಾದ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು,ಸುಧಾಕರ್ ಶೆಟ್ಟಿ, ವರುಣ್ ಶೆಟ್ಟಿ, ಸುನೀಲ್ ಸಾಲ್ಯಾನ್, ಪೃಥ್ವಿರಾಜ್, ಸಚಿನ್, ಪದ್ಮಿನಿ ಭಟ್, ಕಾರ್ತಿಕ್ ಶೆಟ್ಟಿ ಹಾಗೂ ಮತ್ತಿತರು ಉಪಸ್ಥಿತರಿದ್ದರು.
ಕಾಪು, ಶಂಕರಪುರ, ಇನ್ನಂಜೆ, ಉದ್ಯಾವರ ರಿಕ್ಷಾ ಚಾಲಕರು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಧನ್ಯವಾದಗಳನ್ನು ತಿಳಿಸಿದರು