ಉಡುಪಿ, ಎ. 19 : ಬ್ರಾಹ್ಮಣ ಪ್ರಿಯ ವಾಟ್ಸಾಪ್ ಗ್ರೂಪ್ ಮೂಲಕ ನಡೆದ ಅಭಿಯಾನ. ಉಡುಪಿ ಜಿಲ್ಲೆಯ 60 ಕ್ಕೂ ಅಧಿಕ ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ 1500 ರೂಪಾಯಿ ಮೌಲ್ಯದ ಕಿಟ್ ಗಳನ್ನು ಅನಂತ ಇನ್ನಂಜೆ ಇವರ ಮುಂದಾಳತ್ವದಲ್ಲಿ ಗ್ರೂಪಿನ ಸದಸ್ಯರ ಮುಖೇನ ಹಣ ಸಂಗ್ರಹಿಸಿ ವಸ್ತು ಖರೀದಿಸಿ ವಿತರಿಸಲಾಯಿತು.
ಬ್ರಾಹ್ಮಣ ಪ್ರಿಯ ತಂಡವು ಎ. 12 ರಂದು ಮತ್ತು ಎ. 17 ರಂದು ಉಡುಪಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಆಶಕ್ತ ಬ್ರಾಹ್ಮಣ ಕುಟುಂಬವನ್ನು ಗುರುತಿಸಿ ದಿನ ಬಳಕೆಗೆ ಬೇಕಾಗುವ ಸಾಮಗ್ರಿಗಳು ಇರುವ ಕಿಟ್ ಗಳನ್ನು ವಿತರಿಸಿದ್ದರು.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಬ್ರಾಹ್ಮಣ ಪ್ರಿಯ ತಂಡದ ಮುಖ್ಯಸ್ಥರಾದ ಅನಂತ ಇನ್ನಂಜೆ ಅವರು 'ದೇಹ ತೃಪಿಗಿಂತ ಆತ್ಮ ತೃಪ್ತಿಯಲ್ಲಿ ನಂಬಿಕೆ ಇಟ್ಟಿರುವ ನಾವು ಸಹಾಯ ಮಾಡುವಾಗ ಯಾವುದೇ ಫೋಟೋ ತೆಗೆದಿರುವುದಿಲ್ಲ' ಪ್ರತಿಯೊಬ್ಬರು ತಮ್ಮ ತಮ್ಮ ಕೈಲಾದಷ್ಟು ಹಣವನ್ನು ಹಾಕಿ ಕಿಟ್ ಯೋಗ್ಯವಾದ ಸ್ಥಳಕ್ಕೆ ತಲುಪವಂತೆ ಮಾಡಿದ್ದೇವೆ ಎನ್ನುವ ತೃಪ್ತಿ ನಮಗೆ ಇದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಅಶಕ್ತ ಬಡ ಬ್ರಾಹ್ಮಣ ಕುಟುಂಬದ ಮಾಹಿತಿ ಇದ್ದರೆ ನಮಗೆ ತಿಳಿಸಿ ನಾವು ಶೀಘ್ರವಾಗಿ ಸ್ಪಂದಿಸುತ್ತೇವೆ ಮತ್ತು ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ಭರವಸೆಯನ್ನಿತ್ತರು.
ಸಂಪರ್ಕಕ್ಕಾಗಿ :
ಅನಂತ ಇನ್ನಂಜೆ - 9980654078
ಕಾರ್ತಿಕ್ ಇನ್ನಂಜೆ - 8861825435