ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರ ಶಂಕರಪುರ ಉಡುಪಿ ಇಲ್ಲಿ ಆಶಾ ಕಾರ್ಯಕರ್ತೆ ಯರಿಗೆ ಗೌರವ ಅರ್ಪಣೆ ಕಾರ್ಯಕ್ರಮ ಜರಗಿತು.
ಶಂಕರಪುರದ ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದಲ್ಲಿ
ಕುರ್ಕಾಲು, ಮೂಡಬೆಟ್ಟು, ಏಣಗುಡ್ಡೆ, ಗ್ರಾಮಗಳ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ ಮತ್ತು ದಿನಬಳಕೆಯ ಸಾಮಾಗ್ರಿಗಳನ್ನು ನೀಡಲಾಯಿತು.
"ಕರೋನಾ ವೈರಸ್ ಹರಡುವ ಬಗ್ಗೆ ಗ್ರಾಮದ ಪ್ರತಿ ಮನೆಗಳಿಗೆ ಬೇಟಿ ನೀಡಿ ಜಾಗ್ರತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನಮ್ಮ ಮಂದಿರದಿಂದ ಗೌರವ ಅರ್ಪಣೆ ಮಾಡುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ಇದಾಗಿದೆ" ಎಂಗು ಗುರೂಜಿ ಸಾಯಿಈಶ್ವರ್ ಈ ಸಂದರ್ಭದಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಸ್ಮೀತಾ ಪ್ರವೀನ್, ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯರು ಅಶೋಕ್ ಭಟ್ , ಟ್ರಸ್ಟ್ ಅಧ್ಯಕ್ಷರಾದ ವಿಶ್ವನಾಥ ಸುವರ್ಣ, ಶಿಕ್ಷಕ ಅಮೊಕೋಂಡ, ವಿಜಯ್ ಕುಂದರ್ ಸತೀಶ್ ದೇವಾಡಿಗ, ಕಿಶೋರ್ ಕುಮಾರ್ ಉಪಸ್ಥಿತರಿದ್ದರು.