ಲಾಕ್ ಡೌನ್ ಅಗಿರುವ ಹಿನ್ನಲೆಯಲ್ಲಿ ರಕ್ತ ನಿಧಿಯಲ್ಲಿ ತೀವ್ರ ರಕ್ತದ ಕೊರತೆ ಎದುರಾಗಿ , ರೋಗಿಗಳಿಗೆ ಭಾರಿ ಸಮಸ್ಯೆ ಎದುರಾಗಿತ್ತು.
ಲಾಕ್ ಡೌನ್ ನಿಂದಾಗಿ ದಾನಿಗಳು ಹೊರ ಬಾರದ ಹಿನ್ನಲೆಯಲ್ಲಿ ರಕ್ತದ ಸಮಸ್ಯೆ ಎದುರಾಗಿತ್ತು .ಇದನ್ನ ಮನಗಂಡ ನ್ಯೂಸ್ ಮೀಡಿಯಾ ಅಸೋಶಿಯೇಶನ್ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದರು. ಉಡುಪಿಯ ದಕ್ಷ ಹಾಗೂ ಪ್ರಾಮಾಣಿಕ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ , ಉಡುಪಿಯ ಅಜ್ಜರಕಾಡು ಬಳಿ ಗ್ರಂಥಾಲಯ ಉದ್ದೇಶಕ್ಕಾಗಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ಸಾಮಾಜಿಕ ಅಂತರವನ್ನು ಕಾಪಡಿಕೊಂಡು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕುಂದಾಪುರ ,ಕಾರ್ಕಳ ಕಾಪು ,ಮಣಿಪಾಲದಿಂದ ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.
ಈ ಸಂಧರ್ಭದಲ್ಲಿ ಭೇಟಿ ನೀಡಿದ ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್ ಪತ್ರಕರ್ತರ ಕಾರ್ಯವನ್ನು ಶ್ಲಾಘಿಸಿದರು.ಜಿಲ್ಲೆಯಲ್ಲಿ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಶ್ರಮವಹಿಸಿದ ನ್ಯೂಸ್ ಮಿಡಿಯಾ ಅಸೋಸಿಯೆಶನ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.ದಾನಿಗಳು ಸ್ವಯಂ ಪ್ರೇರಿತರಾಗಿ ಅಗಮಿಸಿ ರಕ್ತದಾನ ಮಾಡುವಂತೆ ಜಿಲ್ಲೆಯ ಜನರಲ್ಲಿ ಮನವಿ ಮಾಡಿಕೊಂಡರು.
ರಕ್ತದ ಕೊರತೆಯಿದ್ದು ,ಇದನ್ನ ಮನಗಂಡು ದಾನಿಗಳು ಮುಂದೆ ಬಂದು ರಕ್ತದಾನ ಮಾಡಿದ್ದಾರೆ. ಇನ್ನು ಮುಂದೆಯೂ ಇಂತಹ ಸಾಮಾಜಿಕ ಕೆಲಸಗಳಿಗೆ ನ್ಯೂಸ್ ಮಿಡಿಯಾ ಅಸೋಸಿಯೆಶನ್ ಕೈ ಜೋಡಿಸುತ್ತದೆ ಎಂದು ಸಂಜೆ ಪ್ರಭಾ ಪತ್ರಿಕೆಯ ಪ್ರಧಾನ ಸಂಪಾದಕ ನ್ಯೂಸ್ ಮಿಡಿಯಾ ಅಸೊಸಿಯೆಶನ್ ರಾಜ್ಯಾಧ್ಯಕ್ಷ ವೆಂಕಟೇಶ್ ಪೈ ತಿಳಿಸಿದರು.
ರಕ್ತದ ಸಮಸ್ಯೆ ಬಗೆ ಹರಿಸಲು ಕೈ ಜೋಡಿಸಿದ ಎಲ್ಲಾ ದಾನಿಗಳು ತಾ ಮುಂದು ನಾ ಮುಂದು ಎಂದು ಮುಂದೆ ಬಂದು ಕೈ ಜೋಡಿಸಿರುತ್ತಾರೆ.
ಕಾಪು ಗೋಲ್ಡನ್ ಸುಧೀರ್ ,ಹಾಗೂ ಮಣಿಪಾಲದ ವಿಲ್ಸನ್ ತನ್ನ ಅಪ್ತರೊಂದಿಗೆ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ್ದಾರೆ.
ಅಷ್ಟೇ ಅಲ್ಲದೇ ಸಹಕಾರ ನೀಡಿದ ಜಿಲ್ಲಾಸ್ಪತ್ರೆ ರಕ್ತ ನಿಧಿ ಸಿಬ್ಬಂದಿಯವರಿಗೆ ಹಾಗೂ ಜಿಲ್ಲಾಧಿಕಾರಿ ಜಿ ಜಗದೀಶ್ ಅವರಿಗೂ ಹಾಯ್ ಕರಾವಳಿ ಪತ್ರಿಕೆಯ ಪ್ರಧಾನ ಸಂಪಾದಕ ,ನ್ಯೂಸ್ ಮಿಡಿಯಾ ಅಸೋಸಿಯೆಶನ್ ಉಡುಪಿ ಜಿಲ್ಲಾಧ್ಯಕ್ಷ ಧನ್ಯವಾದಗಳನ್ನು ಅರ್ಪಿಸಿದರು.
ಶಿಬಿರದಲ್ಲಿ ನ್ಯೂಸ್ ಮಿಡಿಯಾ ಅಸೋಸಿಯೆಶನ್ ನ ರಾಜ್ಯ ಖಾಜಾಂಜಿ ರಾಜ್ ಶೇಖರ್ ಸಾಸ್ತಾನ.ಉಡುಪಿ ಜಿಲ್ಲಾ ಕಾರ್ಯದರ್ಶಿ ಗೋಪಾಲ ಶೆಟ್ಟಿ ಮತ್ತಿತ್ತರು ಉಪಸ್ಥಿತರಿದ್ದರು.