ಉಡುಪಿ. ಎ, 25 : ಅನೇಕ ಹೆಸರಾಂತ ಕಂಪನಿಗಳಲ್ಲಿ ಅಡಿಗೆ ಮಾಡಿ ಬಡಿಸಿದವರು ಸಂದೇಶ್ ಅಡುಗೆಮನೆ, ಇವರು ಮೂಲತಃ ಉಡುಪಿಯವರು. ಹೈದರಬಾದ್ ತಾಜ್ ಗ್ರೂಪ್ ಹೊಟೇಲ್ ಗಳಲ್ಲಿ ಸಾಕಷ್ಟು ಕೆಲಸ ಮಾಡಿ ಅನುಭವ ಇರುವ ಇವರು, ಇದೀಗ ಬೆಂಗಳೂರಿನ ಷೆಪ್ ಟಾಕ್ ಎಂಬ ಸಂಸ್ಥೆಯಲ್ಲಿ ಅಡುಗೆ ಮುಖ್ಯಸ್ಥರಾಗಿದ್ದಾರೆ.
ಗಂಗಾವತಿಗೆ ಬಂದಿದ್ದ ಸಂದೇಶ್ ಅಡುಗೆಮನೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾವಿರಾರು ಜನರಿಗೆ ಅಡುಗೆ ಮಾಡಿದ ಘಟನೆ ಗಂಗಾವತಿಯಲ್ಲಿ ನಡೆದಿದೆ.
ಹೈದ್ರಾಬಾದಿನ ತಾಜ್ ಗ್ರೂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ.. ಇದೀಗ ಬೆಂಗಳೂರಿನ ಷೆಪ್ ಟಾಕ್ ಎಂಬ ಆಹಾರ ಸಿದ್ಧಪಡಿಸುವ ಸಂಸ್ಥೆಯಲ್ಲಿ ಮುಖ್ಯ ಅಡುಗೆಯ ಮುಖ್ಯಸ್ಥನಾಗಿ ಇರುವ ಸಂದೇಶ್ ಪೂಜಾರಿ ಈ ಸಾಹಸ ಮಾಡಿದ್ದಾರೆ.
ಕೊರೋನಾ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಇಲ್ಲಿನ ನಗರೇಶ್ವರ ದೇವಸ್ಥಾನಲ್ಲಿ ನಾನಾ ಇಲಾಖೆಯ ಸಿಬ್ಬಂದಿಗೆ ಹಾಗೂ ಬಡವರಿಗೆ ಆಹಾರ ಸಿದ್ಧಪಡಿಸಿ ಕೊಡುವ ಕೆಲಸ ಮಾಡಲಾಗುತ್ತಿದೆ. ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲಾ ಇಲಾಖೆಯ ಸಿಬ್ಬಂದಿಗಳಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಆಹಾರ ತಯಾರಿಸಿ ಸಂದೇಶ್ ರವರು ಕೃತಜ್ಞತೆ ಸಲ್ಲಿಸಿರುತ್ತಾರೆ, ಸಂದೇಶ್ ಅಡುಗೆಮನೆ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೂರುವರೆ ಗಂಟೆಯಲ್ಲಿ ಗರಂ ಗರಂ ಫಲಾವ್ ತಯಾರು ಮಾಡಿದರು.
ಬೆಳಿಗ್ಗೆ ಏಳು ಗಂಟೆಗೆ ಆರಂಭವಾದ ಆಡುಗೆ ಮಾಡುವ ಕಾರ್ಯ ಮೂರುವರೆ ಗಂಟೆಯ ಅವಧಿಯಲ್ಲಿ ಮುಗಿದಿದೆ. ಮಧ್ಯ ಅರ್ಧ ಗಂಟೆ ಮಾತ್ರ ವಿಶ್ರಾಂತಿ ತೆಗೆದುಕೊಂಡ ಯುವಕ, ಇಡೀ ಅಡುಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ್ದಾರೆ.