ಪಡುಬಿದ್ರಿ.ಎ, 27 : ಕೋವಿಡ್ 19 ದುಸ್ಥಿತಿಯಲ್ಲಿ ಜನರಿಗೆ ಅಗತ್ಯ ಆಹಾರ ಪೂರೈಕೆ ನಿರಂತರವಾಗಿ ವಿತರಿಸಿದ್ದು, ಇಂದು ಭಗವತಿ ಗ್ರೂಪ್ ಸದಸ್ಯರು,ದಾನಿಗಳು ಮತ್ತು ಪ್ರಸಿದ್ಧ ವಕೀಲರಾದ ಶ್ರೀ ಉಮನಾಥ್ ಭಂಡಾರಿ ಮತ್ತು ಶ್ರೀಮತಿ ಮಂಜುಳ ದಂಪತಿಗಳು ಸಹಾಯಾರ್ಥವಾಗಿ ನೀಡಲ್ಪಟ್ಟ ದನದ ಆಹಾರಗಳನ್ನು ನೀಲಾವರ ಕಾಮಧೇನು ಗೋಶಾಲೆಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಭಗವತಿ ಗ್ರೂಪ್ ಸದಸ್ಯರಾದ ಯುವರಾಜ್ ಕುಲಾಲ್, ಸಂದೇಶ್ ಶೆಟ್ಟಿ, ದೇವಿತ್ ಶೆಟ್ಟಿ, ರವಿ ಆಚಾರ್ಯ, ಸುಕೇನ್ ಪೂಜಾರಿ ಉಪಸ್ಥಿತರಿದ್ದರು.
ಗೋ ಸಂತತಿಯ ಬಗ್ಗೆ ಅಪಾರ ಕಾಳಜಿಯೊಂದಿಗೆ ಪ್ರಸ್ತುತ ಸ್ಥಿತಿಗತಿಗೆ ಅನುಗುಣವಾಗಿ ವಿಶೇಷ ದಾನನೀಡಿದ ದಾನಿಗಳಿಗೆ ಭಗವತಿ ಗ್ರೂಪ್ ಅಧ್ಯಕ್ಷರು ತಂಡದ ಸರ್ವ ಸದಸ್ಯರ ಪರವಾಗಿ ಹೃದಯಂತರಾಳದ ಅಭಿನಂದನೆಗಳನ್ನು ಸಲ್ಲಿಸಿದರು.