ಜನಸಾಮಾನ್ಯರ ಬದುಕಿಗೆ ಮಹಾಮಾರಿಯಂತೆ ಕಾಲಿಟ್ಟಿರುವ ಕೊರೋನಾದ ದೆಸೆಯಿಂದ ಎಲ್ಲರೂ ಮನೆಯಲ್ಲಿ ಕುಳಿತು ಬೇಸತ್ತು ಹೋಗಿದ್ದರು. ಇಂತಹ ಸಮಯದಲ್ಲಿ ಕೇವಲ ಮನೋರಂಜನೆ ಒಂದನ್ನೇ ನಿಲುಮೆಯನ್ನಾಗಿಸಿ ತುಳುನಾಡ್ದ ಪ್ರತಿಭೆಲು ಫೇಸ್ಬುಕ್ ಪೇಜ್ ಆಯೋಜಿಸಿದ ಆನ್ಲೈನ್ ಹಾಡುಗಾರಿಕೆಯ ಸ್ಪರ್ಧೆಯಲ್ಲಿ ಹಲವಾರು ಕಲಾವಿದರು ವಯೋಮಿತಿ ಇಲ್ಲದೆ ಭಾಗವಹಿಸಿದ್ದು. ಅತಿ ಹೆಚ್ಚಿನ ಲೈಕ್ಸ್ ಗಳನ್ನು ಪಡೆದ ಮೂರು ಸ್ಪರ್ಧಿಗಳನ್ನು ಸ್ಪರ್ಧೆಯ ವಿಜೇತರು ಎಂಬುದಾಗಿ ಗುರುತಿಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ ದಿನಗಳು ಉರುಳಿದಂತೆ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಂಡು ಮೂರು ಉತ್ತಮ ಗಾಯಕರಿಗೂ(ಅತಿ ಹೆಚ್ಚು ಲೈಕ್ಸ್ ಪಡೆದ ಮೂರು ಸ್ಪರ್ಧಿಗಳನ್ನು ಹೊರತುಪಡಿಸಿ) ಮನ್ನಣೆ ನೀಡುವ ಬಗ್ಗೆ ಆಲೋಚಿಸಿ ನಿರ್ಧರಿಸಿದ್ದರು.
ಈ ಮೂರು ಉತ್ತಮ ಗಾಯಕರ ತೀರ್ಪು ನೀಡಿದವರು ಚಂದ್ರಶೇಖರ್ ಮಂಗಳೂರು (ಮಂಗಳಾದೇವಿ). ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರು. ಗಾಯನ ತರಬೇತಿ ನೀಡುವ ಶಿಕ್ಷಕರು. ಇವರು ಈ ಸ್ಪರ್ಧೆಯ ಫಲಿತಾಂಶವನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ತುಳುನಾಡ್ದ ಪ್ರತಿಭೆಲು ಪೇಜ್ ನಲ್ಲಿ ಲೈವ್ ಬರುವ ಮೂಲಕ ತೀರ್ಪು ನೀಡಿದ್ದಾರೆ.
ಇದರಲ್ಲಿ ವಯಸ್ಕರ ಹಾಗೂ ಬಾಲ, ಬಾಲೆಯರ ಎರಡು ವರ್ಗ ಎಂಬಂತೆ ಬೇರ್ಪಡಿಸಿದ್ದು.
ವಯಸ್ಕರಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಮೂರು ಸ್ಪರ್ಧಿಗಳು :
1. ಹೇಮಲತಾ
contestant number: 22
2. ಪ್ರಕಾಶ್ ಅಮೀನ್
Contestant number: 19
3. ವಿದ್ಯಾ
Contestant number: 04
ಅತೀ ಹೆಚ್ಚಿನ ಲೈಕ್ಸ್ ಪಡೆದಿರುವ ಬಾಲ, ಬಾಲೆ ಗಾಯಕರು:
1. ಸುದೀಪ್ತ
Contestant number: 61
2. ಆರಾಧ್ಯ
Contestant number: 55
3. ಶೈನ
Contestant number: 49
ಅಂತೆಯೇ, ತೀರ್ಪುಗಾರರ ಮೆಚ್ಚುಗೆ ಪಾತ್ರರಾದ ಹಾಡುಗಾರ/ಹಾಡುಗಾರ್ತಿಯರು :
1. ಯಶಸ್ವಿನಿ ಉಳ್ಳಾಲ್
Contestant number: 51
2. ಶರತ್ ಬೋಳ
Contestant number: 21
3. ಅ) ರಜತ ಆಚಾರ್ಯ
Contestant number: 28
ಆ) ಲಕ್ಷ್ಮಿ ಕೊಟ್ಯಾನ್
Contestant number:40
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪೇಜ್ ನಿರ್ವಾಹಕ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ.
ಇಲ್ಲಿಯವರೆಗೆ ಹಲವಾರು ಕಲಾವಿದರ ಪರಿಚಯ ತುಳುನಾಡ್ದ ಪ್ರತಿಭೆಲು ಪೇಜ್ ನ ಮುಖಾಂತರ ಆಗಿದೆ.
ಇನ್ನು ಮುಂದೆ ನಿಮ್ಮ ಪ್ರೋತ್ಸಾಹದಿಂದ ಇನ್ನಷ್ಟು ಕಲಾವಿದರನ್ನು ಪರಿಚಯಿಸಿ, ಮುಂದಿನ ಕಲಾಜೀವನಕ್ಕೆ ಹುರಿದುಂಬಿಸುವ ಪ್ರಯತ್ನವನ್ನು ಕಂಡಿತಾ ಮಾಡುತ್ತೇವೆ. ಅದರ ಒಟ್ಟಿಗೆ ಕರಾವಳಿಗೆ ಸಂಬಂಧಪಟ್ಟ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಉತ್ತಮ ವೇದಿಕೆ ನಿರ್ಮಾಣ ಮಾಡುತ್ತೇವೆ. ಭಾಗವಹಿಸಿದ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು