ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಆಸುಪಾಸಿನ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯಾಡಳಿತವೇ ನೇರ ಹೊಣೆ

Posted On: 30-04-2020 02:56PM

ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದಲ್ಲಿ ಪ್ರಸಾದ್ ಕಾಮತ್ ಎಂಬುವವರು ಸ್ವಂತ ಜಮೀನಿನಲ್ಲಿ ಸಣ್ಣದೊಂದು ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಮಾರ್ಚ್ 12 ರಂದು ಶಿಲಾನ್ಯಾಸ ಮಾಡಿದ್ದು. ಮಳೆಗಾಲ ಆರಂಭವಾಗುವ ಮೊದಲೇ ತಳ ಅಂತಸ್ತಿನ ಕಾಮಗಾರಿ ಮುಗಿಯಬೇಕೆಂಬ ತುರಾತುರಿಯಲ್ಲಿ 10 ಅಡಿ ಆಳಕ್ಕೆ ಗುಂಡಿ ತೋಡಿ ಇನ್ನೇನು ತಳಪಾಯ ಹಾಕಬೇಕು ಅನ್ನುವಷ್ಟರಲ್ಲಿ ಕೊರೊನ ಮಹಾಮಾರಿಯ ಆಗಮನದಿಂದ ಲಾಕ್ಡೌನ್ ಘೋಷಣೆಯಾಗಿ ಕಾಮಗಾರಿ ನಿಲ್ಲಿಸಬೇಕಾಯಿತು. ಕಾಮಗಾರಿ ಸ್ಥಗಿತಗೊಂಡಿರುವ ಜಮೀನಿನ ಮಣ್ಣು ಕೆಂಪು ಮಣ್ಣಾಗಿದ್ದು ಇದನ್ನು ಹೂ ಮಣ್ಣು ಎಂದು ಕರೆಯುತ್ತಾರೆ. ಒಂದು ವೇಳೆ ಮಳೆ ಬಂದರೆ ಈ ಮಣ್ಣು ಜಾರಿ ಅಕ್ಕ ಪಕ್ಕದ ಕಟ್ಟಡಗಳಿಗೆ ಬಹಳ ಹಾನಿಯಾಗುವ ಸಂಭವವಿದ್ದು. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿದಾಗ ಸರಕಾರದ ಆದೇಶದಂತೆ ಯಾವುದೇ ರೀತಿಯ ಕಾಮಗಾರಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಸಾದ್ ಕಾಮತ್ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯವರು ಈ ಮೊದಲೇ ಯಾರು ಯಾವುದೇ ಅನುಮತಿಗಾಗಿ ಅವರ ಕಚೇರಿಯ ಬಳಿ ಬರಬಾರದೆಂದು ಆದೇಶಿಸಿರುವುದರಿಂದ ಅವರನ್ನು ಭೇಟಿಯಾಗಲು ಆಗುತ್ತಿಲ್ಲ. ಕನಿಷ್ಠ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದಲ್ಲಿ ಬಹಳ ಉಪಕರವಾಗುತ್ತಿತ್ತು. ಆದರೇ ನಿನ್ನೆ ದಿನ ಉಡುಪಿ ಆದರ್ಶ ಆಸ್ಪತ್ರೆಗೆ ಸಂಬಂಧಿಕರೋರ್ವರನ್ನು ಕರೆದುಕೊಂಡು ಹೋಗುವಾಗ ಆಸ್ಪತ್ರೆಯ ಮುಂಭಾಗದ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಕಂಡು ಬಂದಿದೆ. ಅದು ಕೂಡಾ ಅಲ್ಲಿ ನಡೆಯುತ್ತಿರುವ ಕಾಮಗಾರಿ ಮೊದಲನೇ ಮಹಡಿಯ ಸೆಂಟ್ರಿಂಗ್ ಕೆಲಸ ಆಗಿದ್ದು ಅಲ್ಲಿ ಯಾವುದೇ ರೀತಿಯ ತುರ್ತಿನ ಅಗತ್ಯವಿಲ್ಲ ಅನ್ಸುತ್ತೆ. ಅದೇ ನನ್ನ ಸೈಟಿನಲ್ಲಿ ಮಳೆ ಬಂದರೆ ಅಕ್ಕ ಪಕ್ಕದ ಕಟ್ಟಡಗಳು ಹಾನಿಯಾಗುವ ಸಂಭವವಿದೆ. ಈ ತಾರತಮ್ಯ ಯಾಕೆ.? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ.? ಕನಿಷ್ಠ ಪಕ್ಷ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರೆ ಬಹಳ ಉಪಕರವಾಗುತ್ತಿತ್ತು. ಒಂದು ವೇಳೆ ಮಳೆ ಬಂದು ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯ ಅಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು..