ಕೋವಿಡ್ 19 ವಾರಿಯರ್, ಎರ್ಮಾಳು ಶ್ರೀನಿಧಿ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ನವೀನ್ ಅವರು ಗುರುತಿಸಿದ 16 ತೀರಾ ಬಡ ಕುಟುಂಬಗಳಿಗೆ ದಾನಿಗಳಾದ ಎರ್ಮಾಳು ಹೊಸಮನೆ ಡಿ.ಎಂ. ಶೆಟ್ಟಿ, ಪ್ರತಿಭಾ ಡಿ. ಶೆಟ್ಟಿ ದಂಪತಿ, ಮತ್ತು ಜಯಂತಿ ಚೌಟ ಅವರು ಕೊಡಮಾಡಿದ ಅಕ್ಕಿ ಸಹಿತ ನಿತ್ಯ ಬಳಕೆಯ ದಿನಸಿ ಸಾಮಾಗ್ರಿಗಳನ್ನು ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಬಳಿ ಮೇ 5ರಂದು ವಿತರಿಸಲಾಯಿತು.
ಕೋವಿಡ್ 19 ಕಾರ್ಯಕರ್ತೆಯಾಗಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಸಂದರ್ಭ ಈ ಬಡ ಕುಟುಂಬಗಳನ್ನು ಗುರುತಿಸಿ ಸ್ವತಃ ಮುತುವರ್ಜಿ ವಹಿಸಿ ದಾನಿಗಳ ಸಹಕಾರ ಪಡೆದುಕೊಂಡು ಶಶಿಕಲಾ ನವೀನ್ ಅವರು ಆಹಾರದ ಕಿಟ್ ವಿತರಣೆಗೆ ಸಹಕರಿಸಿದ್ದಾರೆ
ಈ ಸಂದರ್ಭ ದಾನಿಗಳು ಕೋವಿಡ್ 19 ವಾರಿಯರ್ ಶಶಿಕಲಾ ನವೀನ್ ಅವರನ್ನು ಅಭಿನಂದಿಸಿದರು.