ಕೊರೊನ ಮಹಾಮಾರಿಯಿಂದ ಜನರು ತೊಂದರೆಗೊಳಗಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ತಮ್ಮಿಂದಾದಷ್ಟು ಸಹಾಯ ಮಾಡಲೇಬೇಕೆನ್ನುವ ಉದಾರ ಮನಸ್ಸಿನಿಂದ ಪಿ.ಎಸ್ ನಟರಾಜ್ ಭಟ್ ಮತ್ತು ರಾಮಚಂದ್ರ ನಾವಡ ಹಾಗು ಸುಧಾ ನಾವಡ ದಂಪತಿಗಳಿಂದ ಪಡುಬಿದ್ರಿ ಬೀಚ್ ಸಮೀಪದ ಮಧ್ವನಗರದ ಸುಮಾರು 70 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ರವಿ ಬಿ. ಅಂಚನ್, ಸ್ಥಳೀಯರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.