ಕಟಪಾಡಿ ಜೆ ಎನ್ ನಗರದಲ್ಲಿ ಪ್ರತಿ ವರ್ಷವೂ ಬೇಸಿಗೆ ಕಾಲದಲ್ಲಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು. ಈ ವರ್ಷವೂ ನೀರಿನ ಸಮಸ್ಯೆ ಎದುರಾಗಿದೆ, ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಮ್ ಸುವರ್ಣ ಅವರು ತಮ್ಮ ಸ್ವಂತ ಖರ್ಚಿನಿಂದ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದರು, ವಾರಕ್ಕೆ ಮೂರು ಬಾರಿ ಟ್ಯಾಂಕರ್ ನಿಂದ ನೀರನ್ನು ಒದಗಿಸಲಾಗುತ್ತದೆ ಎಂದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗೀತಾಂಜಲಿ ಸುವರ್ಣ ಅವರು, ಪ್ರತಿ ವರ್ಷವೂ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು ಕಳೆದ ಬಾರಿಯು ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ ಬಾರಿ ಜಿಲ್ಲಾ ಪಂಚಾಯತ್ ವತಿಯಿಂದ 8 ಲಕ್ಷ ಅನುದಾನ ದೊರೆತಿದ್ದು ಸ್ಥಳಾವಕಾಶ ದೊರೆಯದ ಕಾರಣ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು, ಆದರೇ ಈ ಬಾರಿ ಜಿಲ್ಲಾ ಪಂಚಾಯತ್ ವತಿಯಿಂದ 10 ಲಕ್ಷ ಅನುದಾನ ಹಾಗೂ ಸ್ಥಳಾವಕಾಶ ಕೂಡ ಕೂಡ ದೊರೆತಿದ್ದು. ಕೊರೊನ ಎಂಬ ಮಹಾಮಾರಿಯ ಅಟ್ಟಹಾಸದಿಂದ ಈ ಕೆಲಸಕ್ಕೆ ಅಡ್ಡಗಾಲು ಇಟ್ಟಂತಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಖಂಡಿತವಾಗಿಯೂ ಶಾಶ್ವತ ಪರಿಹಾರ ದೊರಕಿಸುವಲ್ಲಿ ಸಫಲರಾಗುತ್ತೇವೆ ಎಂದು ಭರವಸೆಯಿತ್ತರು.
ಈ ಸಂದರ್ಭದಲ್ಲಿ ಉಡುಪಿ,ಚಿಕ್ಕಮಗಳೂರು ಜಿಲ್ಲಾ ಸಂಸದೆ ಶೋಭಾ ಕರಂದ್ಲಾಜೆ, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುರೇಶ್ ಶೆಟ್ಟಿ ಗುರ್ಮೆ, ವೀಣಾ ಶೆಟ್ಟಿ, ಪವಿತ್ರ ಶೆಟ್ಟಿ, ಗುರುಪ್ರಸಾದ್, ಶ್ರೀಕಾಂತ್ ನಾಯಕ್, ಗೋಪಾಲಕೃಷ್ಣ ರಾವ್, ಸಂತೋಷ್ ಕುಮಾರ್, ಸುಕೇಶ್, ದಿಲೀಪ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.