ಕಾಪು : ತಾಲೂಕಿನಲ್ಲಿ ಈಗಾಗಲೇ ವಿದ್ಯುತ್ ಕಡಿತವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ಕಾಪು ವಿನಿಂದ ಬೀಚ್ ಕಡೆಗೆ ಹೋಗುವ ದಾರಿಯಲ್ಲಿ ಸೂಕ್ತ ವಿದ್ಯುತ್ ನಿರ್ವಹಣೆಯಾಗುತ್ತಿಲ್ಲ. ಇಲ್ಲಿ ಹಗಲಿನಲ್ಲಿಯೂ ವಿದ್ಯುತ್ ದೀಪಗಳು ಉರಿಯುತ್ತಿದ್ದರೂ ಅಧಿಕಾರಿಗಳಾಗಲಿ, ಗ್ರಾಪಂ ಸದಸ್ಯರು ಅಥವಾ ಅಧ್ಯಕ್ಷರಾಗಲಿ ಕ್ರಮಕೈಗೊಂಡಿಲ್ಲ. ಇದರಿಂದಾಗಿ ವಿದ್ಯುತ್ ಪೋಲಾಗುತ್ತಿದೆ.
ಹಗಲಿನಲ್ಲೂ ವಿದ್ಯುತ್ ದೀಪ ಉರಿಯುತ್ತಿರುವುದು ಯಾರ ಕಣ್ಣಿಗೂ ಬಿದ್ದಿಲ್ಲವೆನಿಸುತ್ತಿದೆ. ಮಧ್ಯಾಹ್ನ ಮೂರು ಗಂಟೆಯಾದರೂ ವಿದ್ಯುತ್ ದೀಪ ಉರಿಯುತ್ತಿರುವುದನ್ನು ಗ್ರಾಮಸ್ಥರಾಗಲಿ, ನಿರ್ವಹಣೆ ಮಾಡುವವರಾಗಲಿ ಗಮನಹರಿಸಿಲ್ಲದಿರುವುದು ವಿಪರ್ಯಾಸವಾಗಿದೆ. ಇದೇ ಕಂಬದ ಪಕ್ಕದಲ್ಲಿರುವ ಇನ್ನು ಕೆಲವೊಂದು ಕಂಬಗಳಲ್ಲೂ ಕೂಡ ವಿದ್ಯುತ್ ದೀಪ ಉರಿಯುತ್ತಿದ್ದು. ಬೀದಿ ದೀಪದ ಬಳಕೆ ಹಗಲಿನ ಸಮಯದಲ್ಲೂ ಸಹ ಯಾವುದೇ ಹಂಗಿಲ್ಲದಂತೆ ಉರಿಯುತ್ತಿರುವುದು ಕಂಡು ಬಂದಿದೆ.
ಸ್ಥಳೀಯ ಗ್ರಾಮಸ್ಥರು ಇತ್ತ ಗಮನ ಹರಿಸಬೇಕು. ಪೋಲಾಗುತ್ತಿರುವ ವಿದ್ಯುತ್‌ನ್ನು ಉಳಿಸುವ ನಿಟ್ಟಿನಲ್ಲಿ ಮಟ ಮಟ ಮಧ್ಯಾಹ್ನದ ಸಮಯದಲ್ಲೂ ಸಹ ಉರಿಯುತ್ತಿರುವ ವಿದ್ಯುತ್ ದೀಪವನ್ನು ರಾತ್ರಿ ಸಮಯದಲ್ಲಿ ಮಾತ್ರ ಉಪಯೋಗಿಸಬೇಕು ಹಾಗೂ ಸ್ವಿಚ್ ಬೋರ್ಡ್ ಇದ್ದಲ್ಲಿ ಬೆಳಿಗಿನ ಜಾವ ವಿದ್ಯುತ್ ದೀಪ ಬೆಳಗುತ್ತಿದ್ದುದ್ದನ್ನು ಕಂಡಾಗ ಮೇಸ್ಕಾಂನವರನ್ನು ಅಥವಾ ಗ್ರಾ.ಪಂನವರನ್ನು ಕಾಯದೇ ಆರಿಸುವ ಕಾರ್ಯಕ್ಕೆ ಸಾರ್ವಜನಿಕರೇ ಮುಂದಾಗಬೇಕು.
ಸ್ವಯಂ ಪ್ರೇರಿತರಾಗಿ ಪೋಲಾಗುವುದನ್ನು ತಡೆಯಿರಿ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಮಾಡುವವರಿಗೆ ವಿದ್ಯುತ್ ಪೋಲಾಗುತ್ತಿರುವುದ ಬಗ್ಗೆ ಅರಿವು ಮೂಡಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ತಾಕೀತು ಮಾಡಬೇಕು. ವಿದ್ಯುತ್ ಸೋರಿಕೆ ಸಮಸ್ಯೆ ಅರ್ಧದಷ್ಟು ಹತೋಟಿಗೆ ಬರುವುದು.
ಇದರ ಜೊತೆಗೆ ಗ್ರಾಮದ ಜನರು ಸಹ ಈ ಬಗ್ಗೆ ಅರಿವು ಹೊಂದಿರಬೇಕು. ತಮ್ಮ ತಮ್ಮ ಗ್ರಾಮಗಳಲ್ಲಿ ಬೆಳಗ್ಗಿನ ವೇಳೆ ಅನಗತ್ಯವಾಗಿ ವಿದ್ಯುತ್ ಪೋಲಾಗುತ್ತಿದ್ದರೆ, ಅದನ್ನು ತಡೆಯಲು ಮುಂದಾಗುವಂತೆ ಪ್ರೇರೇಪಿಸಿದರೆ ಶಾಶ್ವತವಾಗಿ ಪರಿಹಾರ ಕಾಣಲು ಸಾಧ್ಯ ವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹಗಲಿನಲ್ಲಿ ವಿದ್ಯುತ್ ದೀಪ ಉರಿಯುತ್ತಿದ್ದರೆ ತಕ್ಷಣ ಆರಿಸುವ ಕಾರ್ಯವಾಗಬೇಕು. ಇದರಿಂದ ವಿದ್ಯುತ್ ಉಳಿತಾಯವಾಗಬೇಕು. ಮಧ್ಯಾಹ್ನವಾದರೂ ಬೀದಿ ದೀಪಗಳು ಉರಿಯುತ್ತಿರುವುದು. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಿ ವಿದ್ಯುತ್ ಉಳಿತಾಯ ಮಾಡಬೇಕಿದೆ.