ಕೊರೋನಾ ಮಹಾಮಾರಿಗೆ ಇಡಿ ಜಗತ್ತೆ ತತ್ತರಿಸಿ ಹೋಗಿರುವ ಸಂಧರ್ಭದಲ್ಲಿ ರೈತ ಬಂಧು ಎನಿಸಿಕೊಂಡಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಕೋವಿಡ್ -19 ಸಂತ್ರಸ್ತರಿಗಾಗಿ, ಬಡ ಜನರ ಕಷ್ಟವನ್ನು ಅರಿತುಕೊಂಡು ಸರಕಾರದಿಂದ ರೂ 1,610/- ಕೋಟಿ ನೆರವು ಘೋಷಣೆ ಮಾಡಿದ್ದಾರೆ.
ಈ ಪರಿಹಾರ ಘೋಷಣೆಯನ್ನು ಮಾನ್ಯ ಮುಖ್ಯ ಮಂತ್ರಿಗಳು ಕರಾವಳಿ ಭಾಗದಲ್ಲಿ ಸಂಕಷ್ಟಕ್ಕೀಡಾಗಿರುವ ತೆಂಗು ಕೃಷಿಕರಾದ ಮೂರ್ತೆದಾರ (ತುಳುವಿನಲ್ಲಿ ಕಲಿ ಎನ್ನುತ್ತಾರೆ) ವೃತ್ತಿ ನಿರತ ಕಾರ್ಮಿಕರಿಗೆ ಸೂಕ್ತ ಪರಿಹಾರ ಘೋಷಿಸಬೇಕೆಂದು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ. ), ಉಡುಪಿ. ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿಯವರು ಮತ್ತು ಸದಸ್ಯರು ತೆಂಗು ಕೃಷಿಕರಾದ ಮೂರ್ತೆದಾರರ (ಕಲಿ) ಪರವಾಗಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರಿಗೂ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.