ಈಗಾಗಲೇ ಬಹಳ ಪ್ರ(ಕು)ಖ್ಯಾತಿಗೆ ಹೆಸರಾದ ಪಡುಬಿದ್ರಿ ಮೆಸ್ಕಾಂನ ಕಾರ್ಯವೈಖರಿ ಯಾವ ರೀತಿಯಾಗಿರುತ್ತದೆ ಎಂದು ಯಾರಿಗೂ ತಿಳಿಯದು. ಪಡುಬಿದ್ರಿಯ ಮುರುಡಿ ಬ್ರಹ್ಮಸ್ಥಾನದ ಬಳಿಯ ಗದ್ದೆ ಸಮೀಪದ ರಸ್ತೆಯ ಬಳಿ ಇರುವ ತಂತಿಗಳಿಗೆ ತಾಗದ ಗಿಡಗಳನ್ನು ಕಡಿದು ತಮ್ಮ ಪವರ್ ತೋರಿದ್ದಾರೆ. ಇದೇ ಇವರ ಸಾಧನೆ. ಯಾವ ಮರ ತಾಗುತ್ತದೋ ಅದನ್ನು ಕಡಿಯಲು ಶ್ರಮವಹಿಸಬೇಕಾಗಿರುವುದರಿಂದ ಅದನ್ನು ಬಿಟ್ಟು ತಂತಿಯಿಂದ ಅನತಿ ದೂರದಲ್ಲಿರುವ ಗಿಡಗಳನ್ನು ಕಡಿದಿದ್ದಾರೆ. ಸಾರ್ವಜನಿಕರು ಸಂಚರಿಸುವ ದಾರಿಯಾದರೂ ಕಡಿದ ಮರಗಳನ್ನು ಹಾಗೆಯೇ ಬಿಟ್ಟು ಹೋಗುವುದು ಇವರ ಹವ್ಯಾಸವಾಗಿದೆ. ಇನ್ನಾದರೂ ಮೆಸ್ಕಾಂನವರು ಇದರ ಬಗ್ಗೆ ಯೋಚಿಸಲಿ. ಅದೇ ರೀತಿ ಮಳೆಗಾಲಕ್ಕೂ ಮುನ್ನ ತಂತಿಗೆ ತಾಗುವ ಮರ-ಗಿಡಗಳನ್ನು ಕಡಿಯಲಿ ಅದನ್ನು ಬಿಟ್ಟು ತಂತಿಗೆ ತಾಗದ ಮರಗಿಡಗಳನ್ನು ಕಡಿಯಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.