ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳ ಅರ್ಚಕರಿಗೆ ಪಡಿತರ ಕಿಟ್ ವಿತರಣೆ ಸ್ವಾಗತಾರ್ಹ, ಆದರೆ ನಮ್ಮ ಸಮಾಜದ ಒರ್ವ ಮಂತ್ರಿಯಾಗಿ ನಿಮಗೆ ನಮ್ಮ ಸಮಾಜದ ಗರೋಡಿ ಅರ್ಚಕರ ಕಷ್ಟ ಕಾಣಿಸುತ್ತಿಲ್ವೇ ಮಾನ್ಯ ಶ್ರೀನಿವಾಸ ಪೂಜಾರಿ ಅವರೇ.
ಇಂತಹ ಸಂಕಷ್ಟದ ಸಮಯದಲ್ಲಿ ಎಷ್ಟೋ ಗರೋಡಿ ಅರ್ಚಕರ ಕುಟುಂಬ ಸಂಕಷ್ಟದಲ್ಲಿದ್ದು,ಅವರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಎಲ್ಲಾ ಗರೋಡಿ ಅರ್ಚಕರ ಪರವಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಮಾನ್ಯ ಮುಜರಾಯಿ ಇಲಾಖೆಯ ಮಂತ್ರಿಗಳಾದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಜಿಲ್ಲಾ ಅಧ್ಯಕ್ಷರು ಪ್ರವೀಣ್ ಎಮ್.ಪೂಜಾರಿ ತಿಳಿಸಿದರು.
ಈ ಬಗ್ಗೆ ನಮ್ಮ ಕಾಪು ನ್ಯೂಸ್ ನೊಂದಿಗೆ ಮಾತನಾಡಿದ ಪ್ರವೀಣ್ ಎಮ್ ಪೂಜಾರಿ, ಈ ಮನವಿಯನ್ನು ಮುಜರಾಯಿ ಇಲಾಖೆಯು ಪರಿಗಣಿಸಿ ಮುಂದಿನ ದಿನದಲ್ಲಿ ಎಲ್ಲಾ ಗರೋಡಿ ಅರ್ಚಕರಿಗೆ ಸೂಕ್ತ ಪರಿಹಾರ ಒದಗಿಸಿಬೇಕು ಎಂದರು.