ಸುಝ್ಲಾನ್ ಫೌಂಡೇಶನ್ ನಂದಿಕೂರು, ಅವರಾಲು ಮತ್ತು ನಡ್ಸಾಲು ಗ್ರಾಮಗಳ ಹಾಲು ಉತ್ಪಾದಕ ಒಕ್ಕೂಟಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಪು ಶಾಸಕರಾದ ಲಾಲಾಜಿ ಮೆಂಡನ್, ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆಸ್ಪೆನ್ ಎಸ್ಇಝಡ್ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಶೆಟ್ಟಿ, ಫಲಿಮಾರ್ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಫುಟಾರ್ಡೋ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ದಮಯಂತಿ ಅಮೀನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್ ಚಂದ್ರ ಜೆ. ಶೆಟ್ಟಿ, ಅವರಾಲು ಕರುಣಾಕರ್ ಶೆಟ್ಟಿ, ಸುಝ್ಲಾನ್ ಅಧಿಕಾರಿಗಳಾದ ಹಿಮಕರ್ ಪೂಜಾರಿ, ಪುನೀತ್ ರೈ, ಅರುಣ್ ಕುಮಾರ್ ಟಿ., ಆಸ್ಪೆನ್ ಅಧಿಕಾರಿಗಳಾದ ಜಿನರಾಜ್ ಎರ್ಮಾಳ್, ವ್ಯಾಸ ಆಚಾರ್, ಕಿರಣ್ ಕುಮಾರ್, ಸಿಎಸ್ಆರ್ ವಿಭಾಗದ ಅಧಿಕಾರಿ ಪ್ರಸಾದ್ ಕುಮಾರ್ ಮತ್ತು ಸ್ಥಳೀಯ ಹಾಲು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.