ದೇಶದ ಪ್ರಧಾನಮಂತ್ರಿಗಳು ವಿವಿಧ ರೀತಿಯ ಯೋಜನೆಗಳನ್ನು ಹೊರಡಿಸಿದ್ದರು ಕೂಡ ಕೆಲವೊಂದು ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ.
ಮಜೂರು ಮಲ್ಲಾರ್ ಭಾಗದ ರಾಣೆಕೇರಿಯಲ್ಲಿ ಅನೇಕ ಬಡಕುಟುಂಬಗಳು ವಾಸಿಸುತ್ತಿದ್ದು, ಅನೇಕರಿಗೆ ಸರ್ಕಾರದಿಂದ ದೊರೆಯುವ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ, ಅಧಿಕಾರಿಗಳು ಜನರಿಗೆ ಸರಕಾರದಿಂದ ದೊರೆಯುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಸೌಲಭ್ಯಗಳನ್ನು ಒದಗಿಸಬೇಕು.
ಸ್ಥಳೀಯ ನಿವಾಸಿ ಪ್ರಶಾಂತ್ ಪೂಜಾರಿ ಕಾಪು ಅವರಿಗೆ ನಿನ್ನೆ ಸಂಜೆ ದೊರೆತ ಮಾಹಿತಿ ಪ್ರಕಾರ ಅವರು ರಾಣೆಕೇರಿಗೆ ಹೋಗಿದ್ದು ಕೆಲವೊಂದು ಕುಟುಂಬಗಳು ವಿದ್ಯುತ್ ಸೌಕರ್ಯವಿಲ್ಲದೆ ಇಂದೋ ನಾಳೆಯೋ ಜೋರಾದ ಗಾಳಿ ಮಳೆ ಬಂದರೆ ಬೀಳುವ ಪರಿಸ್ಥಿತಿಯಲ್ಲಿದ್ದು, ಗುಡಿಸಲಿನಲ್ಲಿ ವಾಸವಾಗಿದ್ದಾರೆ, ಈ ವಿಷಯವನ್ನು ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭು ಇವರಿಗೆ ತಿಳಿಸಿದ್ದು, ನೀತಾ ಪ್ರಭು ಅವರು ತಕ್ಷಣ ಸ್ಥಳೀಯ ಜನನಾಯಕ ಶ್ರೀಕಾಂತ್ ನಾಯಕ್ ಇವರಿಗೆ ತಿಳಿಸಿದ್ದಾರೆ.
ಸ್ಥಳಕಾಗಮಿಸಿ ಪರಿಶೀಲನೆ ನಡೆಸಿದ ಶ್ರೀಕಾಂತ್ ನಾಯಕ್ ಅವರು ಅಧಿಕಾರಿಗಳಿಗೆ ಕರೆ ಮಾಡಿ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈ ಗೊಳ್ಳುವಂತೆ ಹೇಳಿದರು ಮತ್ತು ಶೀಘ್ರದಲ್ಲಿ ಇದಕ್ಕೆ ಬೇಕಾಗುವ ಕ್ರಮ ಕೈಗೊಳ್ಳುತ್ತೇನೆ ಎಂದು ಶ್ರೀಕಾಂತ್ ನಾಯಕ್ ಭರವಸೆ ನೀಡಿದರು ಈ ಸಂದರ್ಭದಲ್ಲಿ ಸುಧಾಮ್ ಶೆಟ್ಟಿ ಮತ್ತು ಸಚಿನ್ ಸುವರ್ಣ ಉಪಸ್ಥಿತರಿದ್ದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಶಾಂತ್ ಪೂಜಾರಿ ಕಾಪು, ಕಾಪು ತಾಲೂಕಿನಲ್ಲಿ ಇನ್ನು ಅನೇಕ ಇಂತಹ ಮನೆಗಳಿದ್ದು ಮೂಲಭೂತ ಸೌಕರ್ಯಗಳು ದೊರಕದೆ ಬಹಳ ಕಷ್ಟ ಪಡುತ್ತಿದ್ದಾರೆ, ಜನಸಾಮಾನ್ಯರು ಇಂತಹ ವಿಷಯಗಳನ್ನು ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.