ಸೋತು ಗೆಲ್ಲುವೆನೆಂಬ ಛಲ ತೊಟ್ಟು ಪೇಂಟಿಂಗ್ ಕ್ಷೇತ್ರದಲ್ಲಿಯೇ ಸದ್ದಿಲ್ಲದೇ ಸಾಧನೆ ಮಾಡುತ್ತಿರುವ ರಕ್ಷಾ ಪೂಜಾರಿಯವರು ಯುವ ಪೀಳಿಗೆಗೆ ಮಾದರಿ ಹಾಗೂ ಹೆಮ್ಮೆ ಕೂಡಾ.ಕಾಪುವಿನಲ್ಲಿ ನೆಲೆಸಿರುವ ಇವರ ತಂದೆ ರಮೇಶ್ ಪೂಜಾರಿ ಹಾಗೂ ತಾಯಿ ಶಶಿಕಲಾ ಕೋಟ್ಯಾನ್.ಪಿಯುಸಿ ಹಾಗೂ ಕಾಲೇಜು ಶಿಕ್ಷಣವನ್ನು ದಂಡತೀರ್ಥ ಉಳಿಯಾರಗೋಳಿಯಲ್ಲಿ ಪೂರ್ಣ ಗೊಳಿಸಿದ ಇವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಬೇಕೆನ್ನುವ ಉದ್ಧೇಶದಿಂದ ವಿಶುವಲ್ ಆರ್ಟ್ಸ್ ಕಲಿಯಲು ಮೂಡಬಿದ್ರೆ ಯ ಆಳ್ವಾಸ್ ಶಿಕ್ಷಣ ಸಂಸ್ಥೆ ಗೆ ಸೇರುತ್ತಾರೆ.ವಾರ್ಲಿ ಆರ್ಟ್, ವಾರ್ಲಿ ವಾಲ್ ಪೈಂಟಿಂಗ್, ಟ್ರೆಡಿಷನಲ್ ಪೇಂಟಿಂಗ್, ಪಾಟ್ ಪೈಂಟಿಂಗ್, ಪಾಟ್ರೈಟ್ ಫೈಟಿಂಗ್, ಪಾಟ್ರೈಟ್ ಸ್ಕೆಚ್ ಮತ್ತು ಓಯಿಲ್ ಕಲರ್ ಪೈಂಟಿಂಗ್ ಹಾಗೂ ಎಲ್ಲಾ ರೀತಿಯ ಕ್ಯಾನವಸ್ ಪೈಂಟಿಂಗ್ ಮಾಡುವ ಇವರು ಹಲವಾರು ಕ್ಯಾಂಪ್ ಹಾಜರಾಗಿದ್ದಾರೆ. ಉಡುಪಿಯಲ್ಲಿ ನಡೆದ ಪವರ್ ಪರ್ಬ ಎನ್ನುವ ಎಕ್ಸಿಬಿಷನ್ ನಲ್ಲಿ ಪಾಲ್ಗೊಂಡಿದ್ದಾರೆ.ರಾಜ್ಯ ಮಟ್ಟದಲ್ಲಿ ಕೂಡಾ ಇವರ ಸಾಧನೆಗೆ ಪ್ರಶಸ್ತಿ ಪಡೆದು ಕೊಂಡಿದ್ದಾರೆ.ಫೆಬ್ರವರಿ 23ರಂದು ಕಲಾಬ್ದಿ ಎನ್ನುವ ರಾಷ್ಟ್ರ ಮಟ್ಟದ ಪೈಂಟಿಂಗ್ ಸ್ಪರ್ಧೆ ಗೆ ಆಯ್ಕೆ ಯಾಗಿದ್ದರು. ಈ ಎಲ್ಲಾ ಸಾಧನೆಗೆ ಎಲ್ಲರೂ ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕಾಗಿ ವಿನಂತಿ.ಇವರನ್ನು ಸಂಪರ್ಕಿಸಲು 9964777580 ಕರೆ ಮಾಡಿ.. ಇನ್ನೂ ಹೆಚ್ಚಿನ ಸಾಧನೆಗಳು ಇವರಿಂದ ಮೂಡಿ ಬರಲಿ ಎಂಬುದು ನಮ್ಮೇಲ್ಲರ ಆಶಯ..