ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಪಡುಬಿದ್ರಿ ರೋಟರಿ ಮತ್ತು ಇನ್ನರ್ ವೀಲ್ ಕ್ಲಬ್ ಪ್ರತಿಭಾ ಸಮ್ಮಿಲನ-2020 ಸಾಂಸ್ಕೃತಿಕ ಸ್ಪರ್ಧಾ ಸಮಾರೋಪ ಸಮಾರಂಭ

Posted On: 15-10-2020 09:56PM

ಪಡುಬಿದ್ರಿ ರೋಟರಿ ಕ್ಲಬ್ ಹಾಗು ಇನ್ನರ್ ವೀಲ್ ಕ್ಲಬ್‌ ವತಿಯಿಂದ ಪ್ರತಿಭಾ ಸಮ್ಮಿಲನ-2020 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ವನ್ನು ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್ ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಮ್ಮ ಜೀವನದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕಲೆ ಎಂಬುದು ಯಾವತ್ತೂ ನಾಶವಾಗದ ಸಂಪತ್ತು. ಕಲೆಯನ್ನು ಪ್ರಸ್ತುತ ಪಡಿಸಲು ಇಂತಹ ವೇದಿಕೆಗಳನ್ನು ಸದುಪಯೋಗ ಪಡೆದುಕೂಳ್ಳಬೇಕು‌‌. ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಮಾಡುತಿರುವ ರೋಟರಿ ಕ್ಲಬ್ ನ ಕೆಲಸ‌ ಶ್ಲಾಘನೀಯ ಎಂದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕೆ ಆಶಾ ಸುಕುಮಾರ್, ಯುವ ಉದ್ಯಮಿ ಸುಧೀರ್ ಕರ್ಕೇರ ಹೆಜಮಾಡಿ ,ತುಳು ಚಲನಚಿತ್ರ ನಟಿ ರಂಜಿತಾ ಶೇಟ್, ಸಂಗೀತ ಕಲಾವಿದ‌ ಚಂದ್ರಕಾಂತ್ ಆಚಾರ್ಯ ಉಪಸ್ಥಿತರಿದ್ದರು.

ಸನ್ಮಾನ :ತುಳು ಚಲನಚಿತ್ರನಟ ಅರವಿಂದ್ ಬೋಳಾರ್ ಹಾಗು ದಾಯ್ಜಿವಲ್ಡ್ ಸುದ್ದಿ ಸಂಪಾದಕ ಹಾಗು ನಿರೂಪಕ ಚೇತನ್ ಶೆಟ್ಟಿ ಮಂಗಳೂರು ಹಾಗು ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರು ಗಳಾದ ವೈ. ಸುಧೀರ್ ಕುಮಾರ್, ರಮೀಜ್ ಹುಸೇನ್, ಅಬ್ದುಲ್ ಹಮೀದ್ , ಗಣೇಶ್ ಅಚಾರ್ಯ ಎರ್ಮಾಳ್ , ರಿಯಾಜ್ ಮುದರಂಗಡಿ ಹಾಗು ಪೂರ್ವ ಕಾರ್ಯದರ್ಶಿಗಳಾದ ಬಿ.ಯಸ್ ಅಚಾರ್ಯ, ಸುಧಾಕರ್ ಕೆ. ಸಂತೋಷ್ ಪಡುಬಿದ್ರಿರವರನ್ನು ಸಾನ್ಮಾನಿಸಿ ಗೌರವಿಸಲಾಯಿತು.

ಸ್ಪರ್ಧಾ ವಿಜೇತರ ವಿವರ :- ಮಿಮಿಕ್ರಿ: ಪ್ರಥಮ- ಮಹಮ್ಮದ್ ಅತೀಫ್ , ದ್ವಿತೀಯ- ಬಿ.ಯಸ್ ಅಚಾರ್ಯ. ಏಕಪಾತ್ರಭಿನಯ : ಪ್ರಥಮ- ಯಶೋಧ ಪಡುಬಿದ್ರಿ. ದ್ವಿತೀಯ- ಬಿ.ಯಸ್ ಆಚಾರ್ಯ ,ಸಂಗೀತ ವೈಯಕ್ತಿಕ ವಿಭಾಗ: ಪ್ರಥಮ- ಸ್ವಾತಿ ಗಣೇಶ್ ದ್ವಿತೀಯ- ತೌಫೀಕ್ ಪಡುಬಿದ್ರಿ. ಸಂಗೀತ ಡ್ಯೂಯೆಟ್ ವಿಭಾಗ :-ಪ್ರಥಮ- ವೇಣುಗೋಪಾಲ ಶೆಟ್ಚಿ ಹಾಗು ಗುಣವತಿ, ದ್ವಿತೀಯ- ಮಹಮ್ಮದ್ ಅತೀಫ್ ಹಾಗು ಗೀತಾ ಅರುಣ್. ಸಂಗೀತ ಗುಂಪು ವಿಭಾಗ :- ಪ್ರಥಮ -ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ.ದ್ವಿತೀಯ- ಬಿ.ಯಸ್ ಅಚಾರ್ಯ ತಂಡ. ನೃತ್ಯ ವೈಯಕ್ತಿಕ ವಿಭಾಗ :- ಪ್ರಥಮ -ಅದ್ವಿತ್ ಕುಮಾರ್, ದ್ವಿತೀಯ- ಶಿಲ್ಪಾಶ್ರೀ.ನೃತ್ಯ ಗಂಪು ವಿಭಾಗ:-ಪ್ರಥಮ -ಯಶೋಧ ತಂಡ. ದ್ವಿತೀಯ- ಇನ್ನರ್ ವೀಲ್ ತಂಡ. ಪ್ರಹಸನ:- ಪ್ರಥಮ -ಇನ್ನರ್ ವೀಲ್ ತಂಡ , ದ್ವಿತೀಯ :- ಬಿ.ಯಸ್ ಅಚಾರ್ಯ ತಂಡ. ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ , ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು ಹಾಗು ಅತೀ ಹೆಚ್ಚು ಬಹುಮಾನ ಪಡೆದ ಯಶೋಧ ಮತ್ತು ತಂಡ "ಪ್ರತಿಭಾ ಸಮ್ಮಿಲನ -2020 " ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ವಹಿಸಿದರು. ತುಳು ಚಲನಚಿತ್ರ ನಟ ಅರವಿಂದ್ ಬೋಳಾರ್, ದಾಯ್ಜಿವಲ್ಡ್ ಸುದ್ದಿ ಸಂಪಾದಕ ಹಾಗು ನಿರೂಪಕ ಚೇತನ್ ಶೆಟ್ಟಿ ಮಂಗಳೂರು , ಮಾಜಿ ತಾ.ಪಂ.ಸದಸ್ಯ ನವೀನ್ ಚಂದ್ರ ಶೆಟ್ಟಿ, ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್ ಪುರ, ವಲಯ ಸಂಯೋಜಕ ರಮೀಜ್ ಹುಸೇನ್, ಪಡುಬಿದ್ರಿ ಯುತ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾರ್ಯಕ್ರಮದ ನಿರ್ದೇಶಕರಾದ ಗೀತಾ ಅರುಣ್ ಹಾಗು ಸಂತೋಷ್ ಪಡುಬಿದ್ರಿ, ಸುಧಾಕರ್ ಕೆ. ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿ . ಬಿ.ಯಸ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.