Updated News From Kaup

ಅಭಿವೃದ್ಧಿಯ ಪಥದಲ್ಲಿ ಕಾಪು ಪೇಟೆ..!!

Thumbnail
Posted On: 05 Mar 2020, 04:59 PM

ಕೊಚ್ಚಿ, ಪನ್ವೇಲ್, ಕನ್ಯಾಕುಮಾರಿ ನಡುವೆ ಸಂಪರ್ಕ ಸಾಗಿಸುವ ರಾಷ್ಟೀಯ ಹೆದ್ದಾರಿ 66ರಲ್ಲಿ ಹಾದುಹೋಗುವಾಗ ಸಿಗುವ ಚಿಕ್ಕ ಮತ್ತು ಚೊಕ್ಕವಾದ ಪೇಟೆಯೇ #ಕಾಪು_ಪೇಟೆ ಪ್ರವಾಸೋದ್ಯಮ, ಧಾರ್ಮಿಕ, ಶೈಕ್ಷಣಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುವ ಕಾಪು ಕಳೆದ ನಾಲ್ಕೈದು ವರ್ಷಗಳಿಂದ ಪುರಸಭೆ ಮತ್ತು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದ್ದು. ನಂತರದಲ್ಲಿ ಕಾಪು ಪೇಟೆ ಕೂಡ ಹಂತ ಹಂತವಾಗಿ ಬೆಳೆಯುತ್ತಾ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಕಳೆದ ನಾಲ್ಕು ದಶಕಗಳಿಂದ ಕಾಪು ಕ್ಷೇತ್ರವನ್ನಾಳಿದ ಶಾಸಕರುಗಳು ಕಾಪುವಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದು. 2016 ರಲ್ಲಿ ಕಾಪು ಪುರಸಭೆಯಾದ ಬಳಿಕ ಮತ್ತು 2018 ರಲ್ಲಿ ಕಾಪು ತಾಲೂಕು ಆಗಿ ರಚನೆಯಾದ ಬಳಿಕ ಕಾಪು ಪೇಟೆ ಮತ್ತಷ್ಟು ಗುರುತಿಸಲ್ಪಡುತ್ತಿದೆ. ಹಾಗಾಗಿಯೇ ಈಗ ಎಲ್ಲರ ಕಣ್ಣು ಕಾಪುವಿನ ಮೇಲೆ ಎಂಬಂತಾಗಿದೆ. ಮೂರು ಗ್ರಾಮ ಪಂಚಾಯತ್ಗಳನ್ನು ಸೇರಿಸಿಕೊಂಡು 2015-16 ರಲ್ಲಿ ರಚನೆಗೊಂಡ ಕಾಪು ಪುರಸಭೆಯು ಕಾಪುವಿನ ಅಭಿವೃದ್ಧಿಗೆ ಹೊಸ ಶಕೆಯನ್ನು ತೆರೆದಿಟ್ಟಿದೆ. ಕಾಪು ಪೇಟೆಗೆ ತಾಗಿಕೊಂಡಿರುವ ಕಾಪು, ಉಳಿಯಾರಗೋಳಿ ಮತ್ತು ಮಲ್ಲಾರು ಗ್ರಾಮ ಪಂಚಾಯತ್ಗಳನ್ನು ಸೇರಿಸಿಕೊಂಡು ರಚಿಸಿದ ಕಾಪು ಪುರಸಭೆಯು ಕಾಪುವಿನ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದುಕೊಟ್ಟಿದೆ. ಸುಮಾರು 23.44 ಚದರ ಕೀಮೀ ವಿಸ್ತೀರ್ಣದ ಪ್ರದೇಶದಲ್ಲಿ ಹರಡಿರುವ ಕಾಪು ಪುರಸಭೆ ವ್ಯಾಪ್ತಿಯ ಒಟ್ಟು ಜನಸಂಖ್ಯೆ 2011 ರ ಜನಗಣತಿಯ ಆಧಾರದಲ್ಲಿ 21,887 ಪ್ರಸ್ತುತ 23,000 ದಷ್ಟು ಇರಬಹುದು. ಇಲ್ಲಿರುವ ವಾಣಿಜ್ಯ (1,020) ಮತ್ತು ವಸತಿ (7,103) ಸಹಿತವಾದ ಒಟ್ಟು ಕಟ್ಟಡಗಳ ಸಂಖ್ಯೆ (8,123) ಕಾಪು ಪುರಸಭೆಯ ವಾರ್ಷಿಕ ಆದಾಯ ಅಂದಾಜು 1.50 ಕೋಟಿ ರೂ. ದಿನವೊಂದಕ್ಕೆ ಕನಿಷ್ಠ 2.50 ಕೋಟಿ ರೂ ವಹಿವಾಟು ಮಾಡುವ ಸಾಮರ್ಥ್ಯ ಕಾಪು ಪೇಟೆಯದ್ದಾಗಿದೆ. ಕಾಪು ಪುರಸಭೆ ವ್ಯಾಪ್ತಿಗೆ ಬರುವ ಕಾಪು, ಉಳಿಯಾರಗೋಳಿ, ಮೂಳೂರು, ಕೈಪುಂಜಾಲು, ಮಲ್ಲಾರು ಗ್ರಾಮಗಳು ಮಾತ್ರವಲ್ಲದೆ ಪಾಂಗಳ, ಇನ್ನಂಜೆ, ಮಜೂರು, ಪಾದೂರು, ಹೇರೂರು, ಶಂಕರಪುರ, ಉಚ್ಚಿಲ, ಬೆಳಪು, ಎಲ್ಲೂರು, ಎರ್ಮಾಳು, ಪುಂಚಲಕಾಡು ಸಹಿತ ಹಲವು ಪ್ರದೇಶಗಳ ಜನರು ದಿನವಹಿ ವಹಿವಾಟಿಗಾಗಿ ಕಾಪು ಪೇಟೆಯನ್ನೇ ಅವಲಂಬಿಸಿದ್ದಾರೆ. ಕಾಪು ಪುರಸಭೆಯಾಗಿ ರಚನೆಯಾದ ಬಳಿಕ ಕಾಪು ಪೇಟೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಪೊಲಿಪು ಸರಕಾರಿ ಆಸ್ಪತ್ರೆಯಿಂದ ಕಾಪು ಪೇಟೆಯ ಸರ್ಕಲ್ ವರೆಗೆ ಎರಡು ಬದಿಗೆ ಇಂಟರ್ಲಾಕ್ ಅಳವಡಿಕೆ, ಒಳಚರಂಡಿ ಯೋಜನೆಗೆ ಪೈಪ್ಲೈನ್ ಅಳವಡಿಕೆ, ಪೇಟೆಯ ಒಳಗಡೆ ಮಳೆ ನೀರು ಹರಿಯುವ ಚರಂಡಿ ರಚನೆ, ಸರ್ಕಲ್ ನಲ್ಲಿ ಹೈವೋಲ್ಟ್ ಲೈಟ್ ಅಳವಡಿಕೆ, ಹಳೆ ಮಾರಿಗುಡಿ ರಸ್ತೆ ಬಲಿ ಪುಟ್ಪಾತ್ ರಚನೆ, ಕಾಪು ಲಕ್ಷ್ಮೀ ಜನಾರ್ಧನ ಹೋಟೆಲ್ ಬಳಿಯಿಂದ ವಿದ್ಯಾನಿಕೇತನ ಶಾಲಾ ಜಂಕ್ಷನ್ ವರೆಗೆ ಚರಂಡಿ ನಿರ್ಮಾಣ ಸಹಿತ ರಸ್ತೆ ಅಗಲೀಕರಣ ಮತ್ತು ಕಾಂಕ್ರೀಟಿಕರಣ ಕಾಮಗಾರಿ ಪ್ರಗತಿಯಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66 ರಿಂದ ಕಾಪು ಪೇಟೆಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಗಳ ಅಭಿವೃದ್ಧಿ, ಪೇಟೆಯಲ್ಲಿ ಒಳಚರಂಡಿ ನೀರು ಸರಬರಾಜಿಗೆ ವ್ಯವಸ್ಥೆ, ಪೇಟೆಯುದ್ದಕ್ಕೂ ಪುಟ್ಪಾತ್ ರಚನೆ, ಘನತ್ಯಾಜ್ಯ ನಿವಾರಣೆಗೆ ಯೋಜನೆ, ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಿಂದ ವಿದ್ಯಾನಿಕೇತನ ಜಂಕ್ಷನ್ ವರೆಗೆ ಮತ್ತು ವೈಶಾಲಿ ಹೋಟೆಲ್ ನಿಂದ ಸರ್ಕಾರಿ ಆಸ್ಪತ್ರೆಯವರೆಗೆ ಮಳೆನೀರು ಹರಿಯುವ ಚರಂಡಿ ರಚನೆ, ಸುಗಮ ಸಂಚಾರ ಮತ್ತು ಸುವ್ಯವಸ್ಥಿತ ಪಾರ್ಕಿಂಗ್ ಗೆ ವ್ಯವಸ್ಥೆ, ಪೇಟೆಯೊಳಗೆ ಪಬ್ಲಿಕ್ ಟಾಯ್ಲೆಟ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಸಹಿತವಾಗಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಸಹಿತ ವಿವಿಧ ಮೂಲಭೂತ ಸೌಕರ್ಯಗಳ ಜೋಡಣೆ ಅತಿ ಅಗತ್ಯವಾಗಿದೆ. ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳೇ ಕಾಪುವಿನ ಅಭಿವೃದ್ಧಿಯ ಮೂಲ ಕೇಂದ್ರಗಳಾಗಿವೆ. ಕಾಪು ಪೇಟೆಯಲ್ಲಿ ಅಭಿವೃದ್ಧಿಗೆ 1990-2000 ನೇ ಇಸವಿಯಲ್ಲಿ ಕಾಪುವಿನಲ್ಲಿ ಅಸ್ತಿತ್ವಕ್ಕೆ ಬಂದ ಕಾಪು ಅಭಿವೃದ್ಧಿ ಸಮಿತಿಯ ಕೊಡುಗೆಯು ಅಪಾರವಾಗಿದೆ. ಆ ಕಾಲದಲ್ಲಿ ಸಚಿವರಾಗಿದ್ದ ವಸಂತ ವಿ ಸಾಲ್ಯಾನ್ ಅವರ ಇಚ್ಛಾ ಶಕ್ತಿ, ಅವರ ನಂತರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದ ಲಾಲಾಜಿ ಆರ್ ಮೆಂಡನ್ ಮತ್ತು ವಿನಯ್ ಕುಮಾರ್ ಸೊರಕೆ, ಮತ್ತೇ ಶಾಸಕರಾಗಿರುವ ಲಾಲಾಜಿ ಆರ್ ಮೆಂಡನ್ ಅವರುಗಳ ಸಹಕಾರದೊಂದಿಗೆ ಕಾಪು ಪೇಟೆಯನ್ನು ಅಭಿವೃದ್ಧಿಯ ಪಥದತ್ತ ಕೊಂಡಯ್ಯಬೇಕೆನ್ನುವುದು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ಮನೋಹರ್ ಅವರ ಇಚ್ಛೆಯಾಗಿದೆ.. ಮಾಹಿತಿ : ರಾಕೇಶ್ ಕುಂಜೂರು (ಕಾಪು ಉದಯವಾಣಿ ವರದಿಗಾರರು) ನಮ್ಮ ಕಾಪು

ಕಲ್ಲಟ್ಟೆಯಲ್ಲಿ ಜಾರಂದಾಯ, ಬಂಟ ನೆಲೆಯಾದ ಕಥೆ

Thumbnail
Posted On: 05 Mar 2020, 04:59 PM

ಗಗ್ಗಲ್ಲ ಕೋಟೆಯ(ಕಲ್ಲಟ್ಟೆ) ಜಾರಂದಾಯ ಬಂಟ ದೈವ ಪ್ರಾಚೀನ ಕಾಲದಲ್ಲಿ ಕಲ್ಲಟ್ಟೆಯನ್ನು ಕಲ್ಲೊಟ್ಟು ಅಥವಾ ಗಗ್ಗಲ್ಲ ಕೋಟೆಯೆಂದು ಕರೆಯುತ್ತಿದ್ದರು. ಈ ಪ್ರದೇಶವು ಪಾದೇ ಕಲ್ಲಿನಿಂದ ತುಂಬಿದ ಪ್ರದೇಶ. ಬಹು ಪ್ರಾಚೀನ ಹಾಗು ಕಾರ್ಣಿಕ ಸ್ಥಳ, ಪಡುಬಿದ್ರಿ ಬ್ರಹ್ಮಸ್ಥಾನದ ಖಡಗೇಶ್ಶ್ವರಿ ದೇವಿಯ ದೂತ ಕಲ್ಲಟೆ ಜಾರಂದಾಯ ಬಂಟ. ಪಡುಬಿದ್ರಿ ಪೇಟೆಯಿಂದ , ಬ್ರಹ್ಮಸ್ಥಾನಕ್ಕೆ ಹೋಗು ದಾರಿಯಲ್ಲಿ ಕಲ್ಲಟ್ಟೆ ಜಾರಂದಾಯನ ಸುಂದರ ದೈವಸ್ಥಾನ ಕಾಣಲು ಸಿಗುತ್ತದೆ. ಇಲ್ಲಿ ಕಲ್ಲಿನ ಕೋರೆಯಲ್ಲಿ ಒಂದು ಪಂಜುರ್ಲಿ ದೈವವು ಇದೆ. ಇದಕ್ಕೆ ಕೋರೆ ಪಂಜುರ್ಲಿ ಎನ್ನುತ್ತಾರೆ. ಮಂಜಿ ಮರಕಾಲ ಎಂಬ ಮೀನು ಹಿಡಿಯುವವನಿಗೆ ತನ್ನ ನಿಜ ರೂಪ ತೋರಿಸಿ,ಅವನಿಂದ ಕುದುರೆ ಬಂಡಿಯನ್ನು ಮಾಡಿಸಿ ಈಡೀ ಗಗ್ಗಲ್ಲ ಕೋಟೆಯಲ್ಲಿ ಮೆರೆಯುವ ದೈವ ಜಾರಂದಾಯ ಬಂಟ. ಮಂಜಿ ಮರಕಾಲನ ಕಥೆ : ಪ್ರಾಚೀನ ಕಾಲದಲ್ಲಿ ಮಂಜಿ ಮರಕಾಲ ಎಂಬವನು ಗಗ್ಗಲ್ಲ ಕೋಟೆಯಲ್ಲಿ ವಾಸವಾಗಿದ್ದನು. ಇವನ ಕಸುಬು ಮೀನುಗಾರಿಕೆ, ಸಮುದ್ರದಲ್ಲಿ ಮೀನು ಹಿಡಿಯುವುದು. ಒಂದು ದಿನ ಮಧ್ಯ ರಾತ್ರಿಯಲ್ಲಿ ಜಾರಂದಾಯನು ಕಂಚಿನ ಕೋಳಿಯ ರೂಪ ಧರಿಸಿ, ಮಂಜಿ ಮರಕಲನ ಮನೆಯ ಮುಂದೆ ಬಂದು ಕೂಗುತ್ತಾನೆ. ಮಂಜಿ ಮರಕಾಲನು ಕೋಳಿ ಕೂಗು ಕೇಳಿಸಿ ಬೆಳಗ್ಗಾಯಿತು ಎಂದು ಭಾವಿಸಿ, ಬಲೆ ಮತ್ತಿತರ ಮೀನು ಹಿಡಿಯುವ ಸಲಕರಣೆಗಳನ್ನು ಹೊತ್ತು ಸಮುದ್ರ ತೀರಕ್ಕೆ ಹೊರಡುತ್ತಾನೆ. ಮುಟ್ಟಿಕಲ್ಲು ಎಂಬಲ್ಲಿ ಜಾರಂದಾಯನು ನಿಜ ರೂಪ ತೋರಿಸುತ್ತಾನೆ ಮಂಜಿ ಮರಕಾಲನಿಗೆ ಜಾರಂದಾಯನ ನಿಜ ರೂಪ ನೋಡಿ, "ನನಗೆ ಏಕೆ ಒಲಿದೆ ಜಾರಂದಾಯ" ಎಂದು ಕೇಳುತ್ತಾನೆ, ಜಾರಂದಾಯನು ಮಂಜಿ ಮರಕಲನನ್ನು ಕುರಿತು "ಮಂಜಿ ಮರಕಾಲ, ಗಗ್ಗಲ್ಲ ಕೋಟೆಯಲ್ಲಿ ತಿರುಗಲು ನನಗೆ ಒಂದು ಕುದುರೆ ಬಂಡಿ ಬೇಕು, ಅದನ್ನು ಮಾಡಿಸಿ ಕೊಡು" ಎಂದು ಆಜ್ಞಾಪಿಸುತ್ತಾನೆ. ಇದನ್ನು ಕೇಳಿ ಮಂಜಿ ಮರಕಾಲನು "ಜಾರಂದಾಯ, ಒಂದು ಹೊತ್ತು ಊಟ ಮಾಡಲು ಅನ್ನವೇ ಇಲ್ಲದಂತಹ ನನ್ನ ಈ ಪರಿಸ್ಥಿತಿಯಲ್ಲಿ, ಕುದುರೆ ಬಂಡಿ ಹೇಗೆ ಮಾಡಿಸಲಿ " ಎಂದು ಪರಿ ಪರಿಯಾಗಿ ಪ್ರಾರ್ಥಿಸುತ್ತಾನೆ. ಇದನ್ನು ಕೇಳಿ ಜಾರಂದಾಯನು "ಮಂಜಿ ಮರಕಾಲ,ನಿನ್ನ ಕೈಯಲ್ಲಿ ಇದನ್ನು ಮಾಡಿಸುತ್ತೇನೆ, ಏನು ಹೆದರಬೇಡ" ಎಂದು ಹೇಳಿ ಬೆಳ್ಳಿಯ ಕುದುರೆ ಏರಿ ಮಾಯವಾಗುತ್ತಾನೆ. ಹೀಗೆ ಮುಂದಿನ ದಿನಗಳಲ್ಲಿ, ಮಂಜಿ ಮರಕಾಲನು, ಜಾರಂದಾಯನ ದಯೆಯಿಂದ ವ್ಯಾಪಾರದಲ್ಲಿ ತುಂಬಾ ಲಾಭಗಳಿಸಿ, ಅತಿ ಸುಂದರವಾದ ಕುದುರೆ ಬಂಡಿಯನ್ನು ಮಾಡಿಸುತ್ತಾನೆ. ಮಂಜಿ ಮರಕಾಲನ ಕಾಲದಲ್ಲಿ ಒಪ್ಪಿಸಿದ ಕುದುರೆ ಬಂಡಿ ಜೀರ್ಣಾವಸ್ಥೆಯಲ್ಲಿ ಇದ್ದು , ಸ್ವಲ್ಪ ವರ್ಷಗಳ ಹಿಂದೆ ಇದೆ ಮಂಜಿ ಮರಕಾಲನ ಸಂಸಾರದವರು ಹೊಸ ಕುದುರೆ ಬಂಡಿಯನ್ನು ಜಾರಂದಾಯನಿಗೆ ಒಪ್ಪಿಸಿರುತ್ತಾರೆ. ಇವತ್ತಿಗೂ ಮಂಜಿ ಮರಕಾಲ ಸಂಸಾರದವರು ಜಾರಂದಾಯ ನೇಮದ ದಿನ ಅವರ ಮನೆಯಲ್ಲಿ ದೀಪವನ್ನು ಹಚ್ಚಿ ಇಡೀ ನೇಮ ಮುಗಿಯುವವರೆಗೆ ಮನೆ ಬಾಗಿಲನ್ನು ತೆರೆದು ಇಡುತ್ತಾರೆ. ಇವತ್ತಿಗೂ ಜಾರಂದಾಯನು ಮಂಜಿ ಮಾರಕಲನ ಮನೆಗೆ ಭೇಟಿ ಕೊಡುತ್ತಾನೆ ಎಂದು ಪ್ರತೀತಿ ಇದೆ. ಬರಹ: ಜಗನ್ನಾಥ ಭಟ್ಟ ಕಟಪಾಡಿ. Coastal Diaries.. ನಮ್ಮ ಕಾಪು

ಕೃಷ್ಣನೂರು ಉಡುಪಿಯಲ್ಲಿ ಸ್ಯಾಕ್ಸೋಫೋನ್ ಪರಿಣಿತೆ ದೀಕ್ಷಾ ದೇವಾಡಿಗ ಅಲೆವೂರು

Thumbnail
Posted On: 05 Mar 2020, 04:59 PM

ಹೆಸರು : ದೀಕ್ಷಾ ವಿದ್ಯಾರ್ಹತೆ : ಡಿಗ್ರಿ, ಎಮ್.ಎ, ಬಿ.ಇಡಿ ಹವ್ಯಾಸ : ಕರ್ನಾಟಿಕ್ ಸಂಗೀತ ಅಲಿಸುವುದು, ಹಿಂದುಸ್ಥಾನಿ ಸಂಗೀತ ಆಲಿಸುವುದು ಮತ್ತು ಸ್ಯಾಕ್ಸೋಪೊನ್ ನುಡಿಸುವುದು. ಉಡುಪಿ ಜಿಲ್ಲೆ, ಅಲೆವೂರು ರಾಘವ ಶೇರಿಗಾರ ಮತ್ತು ಮೋಹಿಣಿ ದಂಪತಿಗಳ ಮಗಳು ಕುಮಾರಿ ದೀಕ್ಷಾ ಚಿಕ್ಕ ವಯಸ್ಸಿನಲ್ಲಿ ಯೇ( 4ನೇ ತರಗತಿ) ಸ್ಯಾಕ್ಸೋಪೊನ್ ವಾದನವನ್ನು ಕರಗತ ‌ಮಾಡಿಕೊಂಡಾಕೆ. ಕುಮಾರಿ ದೀಕ್ಷಾ ಸುಮಾರು 16 ವರ್ಷಗಳಿಂದ ಸ್ಯಾಕ್ಸೋಪೊನ್ ವಾದನವನ್ನು ನುಡಿಸುತ್ತಾ ಹಿಗೆ ಕೃತಿಗಳನ್ನು ನುಡಿಸುವ ಮಟ್ಟಕ್ಕೆ ಬಂದಿರುತ್ತಾರೆ. ಅಲ್ಲದೇ ತ್ಯಾಗರಾಜರ ಅನೇಕ ಕೃತಿಗಳು, ಪಂಚ ರತ್ನ ಕೃತಿಗಳು, ವರ್ಣಗಳು, ದೇವರ ನಾಮಗಳು ಇವಲ್ಲವನ್ನು ನುಡಿಸುವ ಮಟ್ಟಕ್ಕೆ ಬೆಳೆದಿರುತ್ತಾರೆ. ದೀಕ್ಷಾಳ ಗುರು ಉಡುಪಿ ಕೆ. ರಾಘವೇಂದ್ರ ರಾವ್ ಕೊಳಲು ವಾದಕ ಆಕಾಶವಾಣಿ ಕಲಾವಿದರು, ಅಂತೆಯೇ ಮೊದಲ ಎರಡು ವರ್ಷದ ಸಂಗೀತ ವಾದನ ಅಭ್ಯಾಸವನ್ನು ಅಲೆವೂರು ಶ್ರೀ ಸುಂದರ ಶೇರಿಗಾರ್ ಜೊತೆ ಕಲಿತರು. ಪ್ರಸ್ತುತ ಇವರು ವಾದನ ಅಭ್ಯಾಸ ವನ್ನು ವಿದುಷಿ ಮಾಧವಿ ಭಟ್ ಇವರಲ್ಲಿ ಕಲಿಯುತ್ತಿರುತ್ತಾರೆ. ಕುಮಾರಿ ದೀಕ್ಷಾ ಇವರು ಉಡುಪಿಯಲ್ಲಿ ಹಲವಾರು ಕಡೆ ಸ್ಯಾಕ್ಸೋಪೊನ್ ವಾದನ ಕಾರ್ಯಕ್ರಮವನ್ನು ನೀಡಿರುತ್ತಾರೆ, ಅಲ್ಲದೆ ಮಂಗಳೂರು, ಮೂಡಬಿದಿರೆ, ಬೆಂಗಳೂರು, ಮೈಸೂರು, ಮುಂಬಯಿ, ತಮಿಳುನಾಡು, ಹಾಸನ, ಬಳ್ಳಾರಿ, ಕೇರಳ, ಹುಬ್ಬಳ್ಳಿ, ಕುಮಟಾ, ಹೊನ್ನಾವರ, ಯಲ್ಲಾಪುರ, ಮಲ್ಲಾಪುರ, ಗೋವಾ ಮುಂತಾದ ಹಲವಾರು ಕಡೆಗಳಲ್ಲಿ 8000 ಗಿಂತಲು ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕುಮಾರಿ ದೀಕ್ಷಾ ಇವರಿಗೆ 2006 ರಲ್ಲಿ ಉಡುಪಿ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತ 74 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಯಾಕ್ಸೋಪೊನ್ ವಾದನವನ್ನು ನೀಡಿರುತ್ತಾರೆ. 2008 ರಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. 2008 ರಲ್ಲಿ ಕನ್ನಡ ಸಾಂಸ್ಕೃತಿ ಇಲಾಖೆ ಶ್ರೀ ಚಕ್ರೇಶ್ವರಿ ದೇವಸ್ಥಾನ ಕೋಡಿ ಕನ್ಯಾನ ಸಾಸ್ತಾನ ಇಲ್ಲಿನ ಸಾಧನ ಪ್ರಶಸ್ತಿ ಪತ್ರ. ಸರ್ಟಿಫಿಕೇಟ್ ಅಫ್ ಮೆರಿಟ್ ಹ್ಯಾಸ್ ಬೀನ್ ಅವಾರ್ಡೆಡ್ ಸರ್ಟಿಫಿಕೇಟ್ ಇನ್ instrumental ಮ್ಯೂಸಿಕ್ ಸ್ಯಾಕ್ಸೋಪೊನ್ ಫ್ರಾಮ್ ಗವರ್ನಮೆಂಟ್ ಆಫ್ ಇಂಡಿಯಾ. 2010 ರಲ್ಲಿ ಬೆಂಗಳೂರಿನಲ್ಲಿ ನೀಡಿದ ಧಾರ್ಮಿಕ ಕಾರ್ಯಕ್ರಮಕ್ಕೆ ಸ್ಯಾಕ್ಸೋಪೊನ್ ವಾದನದಲ್ಲಿ ""ನಾದ ವೈಭವ ಬಿರುದು"". 2010 ರಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಾದ್ಯ ಸಂಗೀತದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ, ಕ್ಲಸ್ಟರ್ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಜಿಲ್ಲಾಮಟ್ಟದ ವರೆಗೂ ಪ್ರತಿನಿಧಿಸಿರುತ್ತಾರೆ. ಶ್ರೀ ಕೃಷ್ಣ ಮಠ ಉಡುಪಿ ಶ್ರೀ ಅದಮಾರು ಮಠದ ಸ್ವಾಮೀಜಿಯವರ ಪರ್ಯಾಯ ಮಾಹೊತ್ಸವಕ್ಕೆ ನೀಡಿದ ಧಾರ್ಮಿಕ ಕಾರ್ಯ ಕ್ರಮದಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ. participated - national cultural festival unity in diversity center for cultural resources and training, government of India directorate of art and culture, government of Goa. ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ನಡೆಸಿದ 2017 ನೇ ಸಾಲಿನ ವಾದ್ಯ ಸಂಗೀತ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಈಕೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಅಭಿನಂದನೆಗಳು ನಮ್ಮ ಕಾಪು

ಕರ್ನಾಟಕ ಯುವರತ್ನ ಪ್ರಶಸ್ತಿಗೆ ಭಾಜನರಾದ ರಾಕೇಶ್ ಕುಂಜೂರು

Thumbnail
Posted On: 05 Mar 2020, 04:59 PM

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿಯ ಜಂಗಮ ಮಠದಲ್ಲಿ ನಡೆದ 11 ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಯುವ ರತ್ನ ಪ್ರಶಸ್ತಿಗೆ ಭಾಜನರಾದ ಜೇಸಿಐ ಪೂರ್ವ ವಲಯಾಧ್ಯಕ್ಷ, ರಾಷ್ಟ್ರೀಯ ಸಂಯೋಜಕ, ಸಾಮಾಜಿಕ ಮತ್ತು ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಪ್ರತಿನಿಧಿಯಾಗಿರುವ, ಉದಯವಾಣಿ ಕಾಪು ವರದಿಗಾರ ರಾಕೇಶ್ ಕುಂಜೂರು. ಅಭಿನಂದನೆಗಳು ನಮ್ಮ ಕಾಪು

ಕಾಪು ತಾಲೂಕಿನ ಇನ್ನಂಜೆಯಲ್ಲಿ ಬಾಳೆಹಣ್ಣಿಗೊಲಿಯುವ ಮಡುಂಬು ಮಹಾಗಣಪತಿ ಉತ್ಸವ

Thumbnail
Posted On: 05 Mar 2020, 04:59 PM

ಮಡುಂಬು ಶ್ರೀ ಮಹಾಗಣಪತಿ ದೇವರ ಸನ್ನಿದಿಯಲ್ಲಿ ವರ್ಷಂಪ್ರತಿ ಜರಗುವ ಮಹೋತ್ಸವವು ಯಥಾನುಕ್ರಮದಲ್ಲಿ ತಾರೀಕು 09/02/2020 ರವಿವಾರ ಜರಗಲಿರುವುದು. ಈ ಶುಭ ಸಮಯದಲ್ಲಿ ವರ್ಷಂಪ್ರತಿ ಜರಗುವಂತೆ 108 ನಾಳಿಕೇರ ಗಣಯಾಗ ಪೂರ್ವಾಹ್ನ ಗಂಟೆ 9 ಕ್ಕೆ ಪೂರ್ಣಾಹುತಿ ಮತ್ತು ಮಧ್ಯಾಹ್ನ ಗಂಟೆ 12 ಕ್ಕೆ ಮಹಾಪೂಜೆ, ಉತ್ಸವ ಬಲಿ ನಂತರ ಅನ್ನ ಸಂತರ್ಪಣೆ. ಸಾಯಂಕಾಲ ಗಂಟೆ 5 ರಿಂದ ಶ್ರೀ ಧೂಮಾವತಿ ಭಜನಾ ಮಂಡಳಿ ಕಲ್ಯಾಲು ಮತ್ತು ಶ್ರೀ ದೇವಿ ಭಜನಾ ಮಂಡಳಿ ಮಂಡೇಡಿ ಇವರಿಂದ ಭಜನಾ ಕಾರ್ಯಕ್ರಮ. ರಾತ್ರಿ ಗಂಟೆ 7ಕ್ಕೆ ಉತ್ಸವ ಬಲಿ, 9:30 ಕ್ಕೆ ದೊಡ್ಡ ರಂಗಪೂಜೆ ನಡೆಯಲಿರುವದು ಮತ್ತು ತಾರೀಕು 10/02/2020 ರ ಸೋಮವಾರ ಸಾಯಂಕಾಲ ಗಂಟೆ 6 ಕ್ಕೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ತಾರೀಕು 11/02/2020 ರಂದು ಬೆಳಿಗ್ಗೆ ಚಂಡಿಕಾಹೋಮ, ಸಂಜೆ ಗಂಟೆ 6ಕ್ಕೆ ರಕ್ತೇಶ್ವರಿ ಹೂವಿನ ಪೂಜೆ. ಆ ಪ್ರಯುಕ್ತ ಶ್ರೀ ದೇವರ ಸನ್ನಿದಿಯಲ್ಲಿ ನಡೆಯುವ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುತ್ತೇವೆ ನಮ್ಮ ಕಾಪು Read More..

ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಕೊತಲಕಟ್ಟೆಯಲ್ಲಿ ವಾರ್ಷಿಕ ನೇಮೋತ್ಸವ

Thumbnail
Posted On: 05 Mar 2020, 04:59 PM

ವಾರ್ಷಿಕ ನೇಮೋತ್ಸವದ ಪ್ರಯುಕ್ತ ತಾರೀಕು 21/02/2020 ರಂದು ಭೂತರಾಜ ಬನದಲ್ಲಿ ವಿಶೇಷ ಆಶ್ಲೇಷ ಬಲಿ ಮತ್ತು ಅನ್ನಸಂತರ್ಪಣೆ, ತಾರೀಕು 22/02/2020 ರಂದು ಬಬ್ಬುಸ್ವಾಮಿ ಮತ್ತು ತನ್ನಿ ಮಾನಿಗ, ಹಾಗೂ 23/02/2020 ರಂದು ಜುಮಾದಿ ಬಂಟ, ಗುಳಿಗ ಮತ್ತು ಕೊರಗ ತನಿಯ ದೈವದ ವಾರ್ಷಿಕ ನೇಮೋತ್ಸವ ಜರಗಲಿರುವುದು.. ಈ ಎಲ್ಲಾ ಕಾರ್ಯಕ್ರಮಕ್ಕೆ ಶುಭಕೋರುವವರು : ನಮ್ಮ ಕಾಪು

ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ

Thumbnail
Posted On: 05 Mar 2020, 04:59 PM

ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿದಿಯಲ್ಲಿ ವೇದಮೂರ್ತಿ ಶ್ರೀ ಪಾದೂರು ಲಕ್ಷ್ಮಿ ನಾರಾಯಣ ತಂತ್ರಿಯವರ ನೇತೃತ್ವದಲ್ಲಿ ವರ್ಷವಾಧಿ ಮಹೋತ್ಸವವು ತಾರೀಕು 21-02-2019 ರಂದು ಮೊದಲ್ಗೊಂಡು ತಾರೀಕು 25/02/2019 ರಂದು ಸಂಪನ್ನಗೊಳ್ಳಲಿದೆ ತಾರೀಕು 22/02/2019 ರಂದು ರಾತ್ರಿ 09:30 ರಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ ತುಳು ಹಾಸ್ಯಮಯ ನಾಟಕ "ಪಿರ ಪೋಂಡುಗೆ" ಸರ್ವರಿಗೂ ಆದರದ ಸ್ವಾಗತ ಬಯಸುವ : ನಮ್ಮ ಕಾಪು

ಶಿರ್ವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಥೊತ್ಸವ ಮತ್ತು ಬ್ರಹ್ಮಮಂಡಲೋತ್ಸವ

Thumbnail
Posted On: 05 Mar 2020, 04:59 PM

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾಣಿಬೆಟ್ಟು ಶಿರ್ವ ಇಲ್ಲಿಯ ಅಷ್ಟಬಂಧ-ಸಾನಿಧ್ಯ ಕಲಶ,ಶ್ರೀ ಮನ್ಮಹಾರಥೋತ್ಸವ,ಶ್ರೀ ಬ್ರಹ್ಮಮಂಡಲೋತ್ಸವ - ಮಹಾ ಸಂತರ್ಪಣೆ ಕಾರ್ಯಕ್ರಮವು ದಿನಾಂಕ 06/02/2020 ರಿಂದ ಆರಂಭಗೊಂಡು 12/02/2020 ಪರ್ಯಂತ ನಡೆಯಲಿದೆ... ಎಲ್ಲಾ ಕಾರ್ಯಕ್ರಮಗಳಿಗೆ ತಮಗಿದೋ ಅತ್ಮೀಯ ಸ್ವಾಗತ.. ನಮ್ಮ ಕಾಪು

ಶಿರ್ವ ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ

Thumbnail
Posted On: 05 Mar 2020, 04:59 PM

ಕೋಡು ಪಂಜಿಮಾರು ಮುಲ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ತುಳು ಹಾಸ್ಯಮಯ ನಾಟಕವು ದಿನಾಂಕ 8/02/2020 ರ ಶನಿವಾರ ರಾತ್ರಿ 10-30 ಕ್ಕೆ ಶ್ರೀ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ... ಕಲಾಭಿಮಾನಿಗಳಿಗೆ ಅತ್ಮೀಯ ಅಕ್ಕರೆಯ ಆಮಂತ್ರಣ.... ನಮ್ಮ ಕಾಪು

ತಂದೆ ತಾಯಿಗೆ ಸಮಾನವಾದ ದೇವರಿಲ್ಲ

Thumbnail
Posted On: 05 Mar 2020, 04:59 PM

71 ನೇ ಗಣರಾಜ್ಯೋತ್ಸವದ ಅಂಗವಾಗಿ ಬಿರುವೆರ್ ಕಾಪು ಸೇವಾ ಟ್ರಸ್ಟ್ ವತಿಯಿಂದ ತಾರೀಕು 03/02/2020 ರಂದು 15 ಕುರ್ಚಿಯನ್ನು ಅಪ್ಪ ಅಮ್ಮ ಅನಾಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು.. ಈ ಸಂದರ್ಭದಲ್ಲಿ ಅಪ್ಪ ಅಮ್ಮ ಅನಾಥಾಲಯ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಪೂಜಾರಿ ಕೂರಾಡಿ ಇವರು ಬಿರುವೆರ್ ಕಾಪು ಸೇವಾ ಟ್ರಸ್ಟ್ನ ಸಾಮಾಜಿಕ ಕಾರ್ಯಗಳಿಗೆ ಪ್ರಸಂಶೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ ಶಿರ್ವ ಇದರ ಕಾರ್ಯದರ್ಶಿ ಸುಜನ್ ಎಲ್ ಸುವರ್ಣ ಕುತ್ಯಾರು ಇವರು ಮಕ್ಕಳಿಂದ ಹಾಗೂ ಇನ್ನಿತರ ಕಾರಣದಿಂದ ತಿರಸ್ಕರಿಸಲ್ಪಟ್ಟ ಹಕ್ಕು ವಂಚಿತ ತಂದೆ ತಾಯಿಗಳಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ನೀವು ನೀಡುತ್ತಿರುವ ಸೇವೆ ಅವಿಸ್ಮರಣೀಯ ಎಂದು ಸಂಸ್ಥೆಗೆ ಶುಭ ಹಾರೈಸಿದರು, ಅತಿಥ್ ಸುವರ್ಣ ಪಾಲಮೆ, ಮನೋಹರ್ ಕಲ್ಲುಗುಡ್ಡೆ, ಅನಿಲ್ ಅಮಿನ್ ಕಾಪು, ಕಾರ್ತಿಕ್ ಅಮಿನ್ ಕಲ್ಲುಗುಡ್ಡೆ ಮತ್ತು ವಿಕ್ಕಿ ಪೂಜಾರಿ ಮಡುಂಬು ಉಪಸ್ಥಿತರಿದ್ದರು.. ನಮ್ಮ ಕಾಪು