ಕಾಪು ಸುಗ್ಗಿ ಮಾರಿ ಪೂಜೆ ಸರಳ ರೀತಿಯಲ್ಲಿ ಆಚರಣೆ . ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಕುರಿ, ಕೋಳಿ ಬಲಿ ಕೊಡಲು ಪ್ರಯತ್ನಿಸಿದರೆ
ಕೇಸ್ ಮಾಡಲಾಗುವುದು ಎಂದು ಕಾಪು ವ್ರತ್ತನಿರೀಕ್ಷಕ ಮಹೇಶ್ ಪ್ರಸಾದ್ ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಾಪು ವೀರಭದ್ರ ಸಭಾಂಗಣದಲ್ಲಿ ತಹಶೀಲ್ದಾರ್ ನೇತ್ರತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹರಕೆ ಹೊತ್ತವರು ಇದ್ದರೆ ಮುಂಬರುವ ಆಟಿ ಮಾರಿಪೂಜೆಯಲ್ಲಿ ಸಲ್ಲಿಸಬಹುದು. ಸುಗ್ಗಿ ಮಾರಿ ಪೂಜೆ ದಿವಸ ಯಾವುದೇ ಬಸ್ ಸಂಚಾರ ಇರುವುದಿಲ್ಲ. ಕೊರೊನಾ ಸೋಂಕು ಹಿನ್ನೆಲೆ ಜನ ಜಂಗುಳಿ ತಡೆಯಲು ಸೆಕ್ಷನ್ 144 ಹಾಕಲಾಗಿದೆ.
ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ಯಾರು ಕೂಡಾ ಮನೆಯಿಂದ ಹೊರಗೆ ಬಾರದೆ ಸಹಕರಿಸಬೇಕು ಎಂದರು.
ಕಾನೂನು ಪಾಲನೆ ಕಟ್ಟು ನಿಟ್ಟಿನ ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.