ಕುಂಚದಲ್ಲಿ ಅರಳಿದ ಗಂಗನಾಡಿ ಕುಮಾರ ದೈವದ ಪೈಂಟಿಂಗ್.
ಸದ್ಯ ಕಾರ್ತಿಕ್ ಆಚಾರ್ಯ ಪೈಂಟಿಂಗ್ ಮೂಲಕ ಜನರ ಮನಸೆಳೆದಿದ್ದಾರೆ. ಸಾಮಾಜಿಕ ಜಾಲಾತಾಣದಾದ್ಯಂತ ವೈರಲ್ ಆಗುತ್ತಿದೆ ಗಂಗನಾಡಿ ಕುಮಾರ ದೈವದ ಪೈಂಟಿಂಗ್. ಬಹುಶಃ ಪೈಂಟಿಂಗ್ ಮೂಲಕ ಬಿಡಿಸಿರುವ ಚಿತ್ರ ಕಲೆಯು ಗಂಗನಾಡಿ ಕುಮಾರ ದೈವದ ನೇಮೋತ್ಸವ ಕಟ್ಟಿದವರನ್ನೆ ಆಶ್ಚರ್ಯ ಚಕಿತಗೊಳಿಸಿದೆ ಅರ್ಥಾತ್ ಸಂಪೂರ್ಣವಾಗಿ ಅವರನ್ನೇ ಹೋಲುವಂತಹ ಪೈಂಟಿಂಗ್ ರಚಿಸಿಬಿಟ್ಟಿದ್ದಾರೆ ಕಾರ್ತಿಕ್ ಆಚಾರ್ಯ.
ಶಾಲಾ ದಿನಗಳಿಂದಲೂ ಚಿತ್ರ ಕಲೆ ಹಾಗೂ ಕ್ಲೈ ಮೋಡಲಿಂಗ್ ಪ್ರತಿಭೆಯಾಗಿರುವ ಕಾರ್ತಿಕ್ ಆಚಾರ್ಯ. ಪೈಂಟಿಂಗ್ ಲೋಕದಲ್ಲಿ
ತನ್ನಲ್ಲಿರುವ ಪ್ರತಿಭೆಯನ್ನು ಆಕರ್ಷಣೀಯ ಪೈಂಟಿಂಗ್ ಗಳನ್ನು ಬಿಡಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.
ಪೈಂಟಿಂಗ್ ಕಲಾವಿದನು ತನ್ನಲ್ಲಿರುವ ಚಾತುರ್ಯವನ್ನು ಬಳಸಿಕೊಂಡು ಅದ್ಭುತ ಪೈಂಟಿಂಗ್ ಗಳನ್ನು ರಚಿಸಿದಾಗ ಅದನ್ನು ಪ್ರೋತ್ಸಾಹಿಸುವ ಮೂಲಕ ಕಲಾವಿದನಿಗೆ ಶಕ್ತಿ ತುಂಬುವ ಕೆಲಸಮಾಡಬೇಕಿದೆ ಅದೇ ನಾವು ಅವರಿಗೆ ನೀಡುವ ಬಲುದೊಡ್ಡ ಉಡುಗೊರೆ.
ನಮ್ಮ ನಡುವಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸೋಣ.