ಪಡುಬಿದ್ರಿ ಎ 10 :- ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟು ನಿರಂತರ ಸೇವೆಸಲ್ಲಿಸುತ್ತಿರುವ ಮಾತೃಹೃದಯಿ ಆಶಾ ಕಾರ್ಯಕರ್ತರಿಗೆ
ಪಡುಬಿದ್ರಿ ಭಗವತಿ ಗ್ರೂಪ್ ಮತ್ತು ಶ್ರೀ ಸುಬ್ರಹ್ಮಣ್ಯ ಯುವಕ - ಯುವತಿ ವೃಂದ(ರಿ) ಪಾದೆಬೆಟ್ಟು ಇದರ ಜಂಟಿ ಆಶ್ರಯದಲ್ಲಿ ಇಂದು ದಿನಬಳಕೆಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಉಡುಪಿ ತಾ.ಪಂ ಅಧ್ಯಕ್ಷೆ ಶ್ರೀಮತಿ ನೀತಾ ಗುರುರಾಜ್,ಪ್ರಮುಖರಾದ ಪ್ರಕಾಶ್ ಶೆಟ್ಟಿ ಪಡುಬಿದ್ರಿ, ಗಾಯತ್ರಿ ಪ್ರಭು ಪಲಿಮಾರು, ಸೌಮ್ಯ ಶೆಟ್ಟಿ ನಂದಿಕೂರು, ಶಶಿಕಲಾ ಬೂಡು,ಯುವರಾಜ್ ಕುಲಾಲ್,ಸಂದೇಶ್ ಶೆಟ್ಟಿ, ಸಂತೋಷ್ ಪಡುಬಿದ್ರಿ,ಭಗವತಿ ಗ್ರೂಪ್ ಮತ್ತು ಸುಬ್ರಹ್ಮಣ್ಯ ಯುವಕ ಯುವತಿ ವೃಂದದ ಸದಸ್ಯರು ಉಪಸ್ಥಿತರಿದ್ದರು.