ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಹಿರಿಯಡ್ಕದಲ್ಲಿ "ಹಿರಿಯರೆಡೆಗೆ ನಮ್ಮ ನಡಿಗೆ" ಎಂಬ ಕಾಯ೯ಕ್ರಮ

Posted On: 10-10-2020 02:59PM

ಹಿರಿಯಡಕ -: - ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕ.ಸಾ.ಪ ಅಜೆಕಾರು ಹೋಬಳಿ ಸಮಿತಿ ಮತ್ತು ಆದಿ ಗ್ರಾಮೋತ್ಸವ ವತಿಯಿಂದ ಹಿರಿಯರೆಡೆಗೆ ನಮ್ಮ ನಡಿಗೆ ಎಂಬ ಕಾಯ೯ಕ್ರಮದ ಅಂಗವಾಗಿ ಅ.10ರಂದು ಪಂಚನಬೆಟ್ಟು ಪ್ರೌಡಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಎ ರವರನ್ನು ಅವರ ಮನೆಯಲ್ಲಿ ಅಪೂವ೯ ಸಾಧಕ ಗೌರವ ನೀಡಿ ಸನ್ಮಾನಿಸಲಾಯಿತು.

ಈ ಸಂದಭ೯ದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನಮ್ಮ ನೆಲದ ಗುಣವನ್ನು ತಿಳಿಸುವ ಶಿಕ್ಷಣದ ಅಗತ್ಯವಿದೆ.ಗ್ರಾಮದಲ್ಲಿ ಶಿಕ್ಷಣ ಕೇಂದ್ರಗಳು ಸ್ಥಾಪನೆ ಆದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ.ಮಕ್ಕಳ ಭವಿಷ್ಯದ ತಳಹದಿ ಗಟ್ಟಿಯಾಗಲು ಇದು ಅಗತ್ಯವಿದೆ ಎಂದರು.ಲೋಕಕ್ಕೆ ದೀಪ ಹಚ್ಚಲು ನಮಗೆ ಅಸಾಧ್ಯ ಆದರೆ ನಮ್ಮ. ಸುತ್ತ ಬೆಳಕಿನ ದೀಪ ಹಚ್ಚಬಹುದು ಶಿಕ್ಷಣ ಇದಕ್ಕೆ ಪೂರಕ ಎಂದು ಹೇಳಿದರು.

ನಿವೃತ್ತ ಮುಖ್ಯ ಶಿಕ್ಷಕ ಮೌರೀಸ್ ತಾಮ್ರೋ ವಿದ್ಯಾಥಿ೯ಗಳು ಶಿಸ್ತಿನ ಸಿಪಾಯಿ ಆಗಬೇಕು. ಆಂಗ್ಲ ಮಾಧ್ಯಮ ಶಿಕ್ಷಣದ ಭರಾಟೆಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ದುಃಖಕರ ಇದರ ಉಳಿವಿಗಾಗಿ ಎಲ್ಲರೂ ಒಂದಾಗಬೇಕೆಂದರು.

ಸಮಿತಿ ಸಂಚಾಲಕ ಪತ್ರಕತ೯ ಶೇಖರ ಅಜೆಕಾರು ಪ್ರಸ್ತಾವನೆಗೈದರು.ಸೌಮ್ಯಶ್ರೀ ಅಜೆಕಾರ್ ವoದಿಸಿದರು.ರಾಘವೇಂದ್ರ ಪ್ರಭು'ಕವಾ೯ಲು ನಿರೂಪಿಸಿದರು.ಕಾಯ೯ಕ್ರಮದಲ್ಲಿ ರವೀಂದ್ರ ಆಚಾರ್ ಉಪಸ್ಥಿತರಿದ್ದರು.