ಉದ್ಯಮಿ ನಿಶಾಂತ್ ವಿ.‌ ಅಂಚನ್ ಅವರಿಗೆ ಸಾಧನಾಶ್ರೀ ಪುರಸ್ಕಾರ
Thumbnail
ಕಾಪು : ಜೇಸಿಐ ಮಡಂತ್ಯಾರು ಘಟಕದ ಆಶ್ರಯದಲ್ಲಿ ರವಿವಾರ ನಡೆದ ವಲಯ 15ರ "ಮೃದಂಗ" ವ್ಯವಹಾರ ಸಮ್ಮೇಳನದಲ್ಲಿ ಜೇಸಿಐ ಮುಂಡ್ಕೂರು ಭಾರ್ಗವ ಘಟಕದ ಉಪಾಧ್ಯಕ್ಷ, ಉದ್ಯಮಿ ನಿಶಾಂತ್ ವಿ. ಅಂಚನ್ ಅವರನ್ನು ಜೇಸಿಐ ಸಾಧನಾಶ್ರೀ ಪುರಸ್ಕಾರದೊಂದಿಗೆ ಗೌರವಿಸಲಾಯಿತು‌. ಜೇಸಿಐ ವಲಯ 15ರ ವಲಯಾಧ್ಯಕ್ಷ ಅಭಿಲಾಶ್ ಬಿ.ಎ., ವ್ಯವಹಾರ ವಿಭಾಗದ ವಲಯ ನಿರ್ದೇಶಕ ಅಶೋಕ್ ಗುಂಡ್ಯಲ್ಕೆ, ವಲಯ ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ ನೇತೃತ್ವದಲ್ಲಿ ಸಾಧನಾಶ್ರೀ ಪ್ರಶಸ್ತಿ ಪ್ರಧಾನಿಸಲಾಯಿತು‌. ನಿಕಟ ಪೂರ್ವ ವಲಯಾಧ್ಯಕ್ಷ ಗಿರೀಶ್ ಎಸ್.ಪಿ., ಪೂರ್ವ ವಲಯಾಧ್ಯಕ್ಷ ಸಂಪತ್‌ ಸುವರ್ಣ, ವಲಯಾಧಿಕಾರಿ ಗಣೇಶ್ ಆಚಾರ್ಯ, ಜೇಸಿಐ ಮುಂಡ್ಕೂರು ಭಾರ್ಗವದ ಅಧ್ಯಕ್ಷ ವಸಂತ್ ಪೂಜಾರಿ, ಜೇಸಿಐ ಮಡಂತ್ಯಾರು ಅಧ್ಯಕ್ಷೆ ಅಮಿತಾ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು‌.
29 Jul 2025, 08:59 AM
Category: Kaup
Tags: