ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ತಾಲೂಕಿನ ಪಡುಬಿದ್ರಿ ಬೀಚ್ ಗೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ

Posted On: 12-10-2020 11:52AM

ಪಡುಬಿದ್ರಿಯ ಕಾಮಿನಿ ನದಿಯು ಸಮುದ್ರ ಸೇರುವ ಕಡಲ ತೀರದ ಪ್ರದೇಶವು ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರದೊಂದಿಗೆ ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ.

ಭಾರತವು ಮೊದಲ ಪ್ರಯತ್ನದಲ್ಲಿಯೇ 8 ಬೀಚ್ ಗಳಿಗೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲಿ ಪಡುಬಿದ್ರಿ ಬೀಚ್ ಕೂಡ ಸೇರಿದೆ.

ಮೂವತ್ತಮೂರು ಮಾನದಂಡಗಳ ಆಧಾರದ ಮೇಲೆ ಬ್ಲೂ ಫ್ಲ್ಯಾಗ್ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆಯನ್ನು ಡೆನ್ಮಾರ್ಕ್ ನ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆ ನೀಡಿದೆ. ಆ ಮೂಲಕ ವಿಶ್ವಭೂಪಟದಲ್ಲಿ ಪಡುಬಿದ್ರಿ ಕಡಲ ಕಿನಾರೆಯು ರಾರಾಜಿಸಲಿದೆ.