ಉಡುಪಿಯಲ್ಲಿ ಶಾಲೆಗೆರಡು ಗಿಡ ಅಭಿಯಾನ ಕಾಯ೯ಕ್ರಮ
Posted On:
12-10-2020 01:41PM
ಉಡುಪಿ :- ನವ್ಯ ಚೇತನ ಶಿಕ್ಷಣ ಸಂಶೋಧನೆ, ಕಲ್ಯಾಣ ಟ್ರಸ್ಟ್, ಮಲಬಾರ್ ಗೋಲ್ಡ್ & ಡೈಮoಡ್ಸ್, ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕ್ರಿಶ್ಚಿಯನ್ ಪಿ.ಯು ಕಾಲೇಜು, ಸಹಯೋಗದಿಂದ ನವ್ಯ ಚೇತನ ಶಿಕ್ಷಣ ಸಂಶೋಧನೆ, ಕಲ್ಯಾಣ ಟ್ರಸ್ಟ್ ನ ಶಾಲೆಗೆರಡು ಗಿಡ ಅಭಿಯಾನದ ಅಂಗವಾಗಿ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ಅ.11 ರಂದು ನಡೆಯಿತು.
ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದ , ಉಡುಪಿ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಿವಿಲ್ ನ್ಯಾಯಾಧೀಶೆ ಕಾವೇರಿ ಗಿಡ ನೆಟ್ಟು ಶುಭ ಹಾರೈಸಿದರು. ಟ್ರಸ್ಟಿನ ಅಧ್ಯಕ್ಷರಾದ ಡಾ. ಶಿವಾನಂದ ನಾಯಕ್ ಅವರು ಮಾತನಾಡಿ ಗಿಡ ನೆಟ್ಟು ಪೋಷಿಸುವುದು ನಮ್ಮ ಹವ್ಯಾಸವಾಗಬೇಕು. ಪರಿಸರ ಮಾಲಿನ್ಯ ತಡೆಯಲು ಈ ಕೆಲಸ ನಿರಂತರವಾಗಿ ಮಾಡಬೇಕು ಎಂದರು.
ಈ ಸಂದಭ೯ದಲ್ಲಿ ಮಲಬಾರ್ ಗೋಲ್ಡ್ ನ ಪ್ರಬಂಧಕ ರಾಘವೇಂದ್ರ ನಾಯಕ್, ತನ್ಜಿಮ್, ಕಾಲೇಜಿನ ನಾಗರಾಜ್ ಗುಳ್ಳಾಡಿ, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು, ಕವಾ೯ಲು ,ರಫೀಕ್ ಖಾನ್ ಕಾಲೇಜಿನ ಸಿಬ್ಬoದಿಗಳು ಉಪಸ್ಥಿತರಿದ್ದರು.