ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇತ್ತೀಚೆಗೆ ನಿಧನರಾದ ದೈವಾರಾಧಕ ಮುನಿಯಾಲು ಮುಟ್ಲುಪಾಡಿಯ ಅರುಣ್ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು

Posted On: 14-10-2020 05:01PM

ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಹೆಬ್ರಿ ಘಟಕದ ವತಿಯಿಂದ ಇತ್ತೀಚೆಗೆ ನಿಧನರಾದ ದೈವದ ಸೇವೆ ಮಾಡುತ್ತಿದ್ದ ಮುನಿಯಾಲು ಮುಟ್ಲುಪಾಡಿಯ ಅರುಣ್ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಮಣಿಪಾಲ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ ಪೂಜಾರಿ ಬೈಕಾಡಿ, ಉಪಾಧ್ಯಕ್ಷ ಅನೀಶ್ ಕೋಟ್ಯಾನ್, ದಯೇಶ್ ಕೋಟ್ಯಾನ್, ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ ಮುದ್ರಾಡಿ, ಉಪಾಧ್ಯಕ್ಷ ವಿಠ್ಠಲ ಪೂಜಾರಿ ಹೆಬ್ರಿ ಬೀಡು, ಕಾರ್ಯದರ್ಶಿ ಅಣ್ಣಿ ಪಾಣಾರ, ಕೋಶಾಧಿಕಾರಿ ಅರುಣ್ ಪಾತ್ರಿ ಬೆಪ್ಡೆ, ರಂಗ ಪಾಣಾರ, ನರಸಿಂಹ ಮುಂಡಾಡಿಜಡ್ಡು, ಸದಸ್ಯರಾದ ಮಾಧವ ಪಾಣಾರ ಶಿವಪುರ, ಸಂತೋಷ್ ಪೂಜಾರಿ ಮುದ್ರಾಡಿ, ಮುದ್ದು ಪೂಜಾರಿ ಮುದ್ರಾಡಿ, ಪ್ರವೀಣ ಪಾಣಾರ ಶಿವಪುರ, ಗುಂಡು ಪರವ ಚೇರ್ಕಾಡಿ, ಸಂತೋಷ ಆರ್.ಡಿ, ಕೊರಗ ಪೂಜಾರಿ ಮುಟ್ಲುಪಾಡಿ, ರಾಮ ಪೂಜಾರಿ ಮುಟ್ಲುಪಾಡಿ ಉಪಸ್ಥಿತರಿದ್ದರು.