ಈ ಕಲಾವಿದನ ಬಗ್ಗೆ ನಾವೇನೂ ಹೇಳ್ಬೇಕಂತಾನೇ ಇಲ್ಲ,
ಯಾಕಂದ್ರೆ ಈತ ತನ್ನಲ್ಲಿರುವ ಕಲೆಯಿಂದ ಈಗಾಗಲೇ
ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ..
ಈ ಅದ್ಭುತ ಕಲಾವಿದ ನಮ್ಮ ಕಾಪುವಿನವರು ಅನ್ನೋದೆ ನಮ್ಮ ಹೆಮ್ಮೆ .
ಹೌದು, ಕಾಪುವಿನ ಮಜೂರಿನವರು ಈ ಸಕಲಕಲಾವಲ್ಲಭ.
ಇವರ ಫೋಟೋ / ವೀಡಿಯೋ ನೋಡಿದ ತಕ್ಷಣ ಹೆಚ್ಚಿನವರು ಗುರುತಿಸೋದು ಇದು ಪೃಥ್ವಿ ಅಂಭಾರ್ ಅಂತ.
ಆದರೆ ನಾವು ಗುರುತಿಸೋದು ಉಂದು ನಮ್ಮ ಊರುದ ಜವನೆ ನಾಗರಾಜ್ ಅಂಬೇರ್ ಅಂತ.
ಇವರು ಮೊದಲು ಗುರುತಿಸಿಕೊಂಡಿದ್ದು ಈ ಟೀವಿಯ ದಿ ಗ್ರೇಟ್ ಕರ್ನಾಟಕ ಡಾನ್ಸ್ ಲೀಗ್ ರಿಯಾಲಿಟಿ ಶೋನಲ್ಲಿ..
ನಂತರ ಸೈ ಅನ್ನೋ ಡಾನ್ಸ್ ಶೋನಲ್ಲಿ .
ಕೇವಲ ಡಾನ್ಸ್'ಗೆ ಮಾತ್ರ ಸೀಮಿತವಾಗಿರದೆ ಕಲೆಯ ಇನ್ನಿತರ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಮಲ್ಟಿ ಟ್ಯಾಲೆಂಟೆಡ್ ಎಂದು ಗುರುತಿಸಿಕೊಂಡರು.
ಮುಂದಿನ ದಿನಗಳಲ್ಲಿ ಮಂಗಳೂರಿನ ರೆಡ್ ಎಫ್.ಎಮ್'ನಲ್ಲಿ RJ / ರೇಡಿಯೋ ಜಾಕಿಯಾಗಿ ಗಮನ ಸೆಳೆದರು , ಆಲ್ಬಂ ಸಾಂಗ್ಸ್ , ಶಾರ್ಟ್ ಫಿಲ್ಮ್ಸ್ ,ಸೀರಿಯಲ್'ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು,
ಹಾಡುವ,ಕುಣಿಯುವ,ಬರೆಯುವ,ನಟಿಸುವ ಈ ಕಲಾವಿದನಿಗೆ ನಿರ್ದೇಶಕನಾಗೋದು ಕೂಡ ದೊಡ್ಡ ಕನಸು.
ಕಲಾ ಪಯಣದಲ್ಲಿ ಏಳು ಬೀಳುಗಳನ್ನು ಕಂಡ ಪೃಥ್ವಿ,
ತುಳು ಚಿತ್ರರಂಗದಲ್ಲಿ ಹೀರೋ ಎಂದರೆ ಪೃಥ್ವಿ ಎಂಬ ಮಟ್ಟಿಗೆ ಬೆಳೆದಿರುವುದು ನಿಮಗೆಲ್ಲಾ ಗೊತ್ತೇ ಇದೆ.
ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ದಾರಾವಾಹಿ ಜೊತೆ ಜೊತೆಯಲಿಯಲ್ಲಿ ನೀಲ್ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರೆ.
ಇದೀಗ ಪೃಥ್ವಿಗೆ ಅತಿದೊಡ್ಡ ಬ್ರೇಕ್ ನೀಡಿದ
ದಿಯಾ ಸಿನಿಮಾದ್ದೇ ಸುದ್ದಿ..
ದಿಯಾ ಚಿತ್ರದಲ್ಲಿ ಪೃಥ್ವಿಯದ್ದು ಆದಿ ಅನ್ನೋ ಪಾತ್ರ.
ಈ ಪಾತ್ರದಲ್ಲಿ ಆದಿ ಒಬ್ಬ ಸದಾಲವಲವಿಕೆಯಲ್ಲಿರೋ ಯುವಕ ಹಾಗೂ ಅಮ್ಮನ ಮುದ್ದಿನ ಮಗ.
ಈ ಚಿತ್ರದಲ್ಲಿ ಜಾಸ್ತಿ ಏನೂ ಸ್ಟಾರ್ ಕಾಸ್ಟ್ ಆಗ್ಲಿ - ಕಲಾವಿದರಾಗ್ಲಿ ಇಲ್ಲ.
ಚಿತ್ರದುದ್ದಕ್ಕೂ ಪ್ರಮುಖವಾಗಿ ನಾಲ್ಕು ಪಾತ್ರಗಳು
ಹೀರೋಯಿನ್ ದಿಯಾ, ನಾಗಿಣಿ ಸೀರಿಯಲ್ಲಿನಲ್ಲಿ ನಾಯಕ ನಟನಾಗಿದ್ದ ದಿಶಾಂತ್ / ಅರ್ಜುನ್ , ಆದಿ/ ಪೃಥ್ವಿ ಹಾಗೂ ಪೃಥ್ವಿ ತಾಯಿ.
ಅದರಲ್ಲೂ ಹೈಲೈಟ್ ಆಗೋದು ನಮ್ಮ ಆದಿಯ ಪಾತ್ರ.
ಈ ಪಾತ್ರ ನಗಿಸುತ್ತದೆ - ಅಳಿಸುತ್ತದೆ-ಪ್ರೀತಿಸುತ್ತದೆ.
ಈ ಚಿತ್ರಕ್ಕೆ ಹಣ ಎಷ್ಟು ಖರ್ಚು ಮಾಡಿದ್ದಾರೋ ಗೊತ್ತಿಲ್ಲ..
ಆದ್ರೆ ಬುದ್ಧಿ ಮಾತ್ರ ಚೆನ್ನಾಗಿ ಖರ್ಚು ಮಾಡಿದ್ದಾರೆ.
"ಕಾಸ್ ಏತ್ ಖರ್ಚಿ ಮಲ್ದೆರಾ ಗೊತ್ತುಜ್ಜಿ, ಆಂಡ ಮಂಡೆಖರ್ಚಿ ಎಡ್ಡೆ ಮಲ್ದೆರ್".
ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರೋದು
ಈ ಹಿಂದೆ ಸಂಚಲನ ಮೂಡಿಸಿದ್ದ 6-5=2 ಚಿತ್ರದ ಡೈರೆಕ್ಟರ್ ಕೆ.ಎಸ್ ಅಶೋಕ್.
ಥಿಯೇಟರ್'ಗಳಲ್ಲಿ ಕಾರಣಾಂತರಗಳಿಂದ ಸಿನೇಮಾ ಜಾಸ್ತಿ ದಿನ ಓಡಲಿಲ್ಲವಾದರೂನು,
ಅಮೆಜಾನ್ ಪ್ರೈಮ್ ನಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಏನೇ ಆಗಲಿ, ಪೃಥ್ವಿ ಪಾಲಿಗೆ ದಿಯಾ ಬೆಳಕಾಗಿದ್ದು ಮಾತ್ರ ಸುಳ್ಳಲ್ಲ..
ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾಸೇವೆ ಮಾಡುವಂತೆ ಕಾಪು ಮಾರಿಯಮ್ಮ ಹಾಗೂ ಕಾಪು ಸಾವಿರ ಸೀಮೆಯ ಒಡೆಯ ಲಕ್ಷ್ಮೀ ಜನಾರ್ಧನ ಸ್ವಾಮಿಯು ಅನುಗ್ರಹಿಸಲಿ ಎಂದು ಕಾಪು ಜನತೆಯ ಪರವಾಗಿ ಹಾರೈಸುತ್ತೇವೆ.
✍