ಇನ್ನಂಜೆ ಗ್ರಾಮಪಂಚಾಯತಿಯ ಹದಿನಾಲ್ಕನೇ ಹಣಕಾಸಿನ ನಿಧಿಯಿಂದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ "ಪಾಂಗಾಳ ಹಿಂದೂ ರುದ್ರಭೂಮಿಯನ್ನು" ಸುಸಜ್ಜಿತ ಗೊಳಿಸಿದ ಇನ್ನಂಜೆ ಗ್ರಾಮ ಪಂಚಾಯತಿನ ಅಭಿವೃದ್ಧಿ ಅಧಿಕಾರಿಗಳಿಗೆ ,ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರೆಲ್ಲರಿಗೂ ಗ್ರಾಮಸ್ಥರ ಪರವಾಗಿ ಧನ್ಯವಾದಗಳು.
ಇದರ ಹಿಂದೆ ಶ್ರಮಿಸಿದ ಪಂಚಾಯತ್ ಅಧ್ಯಕ್ಷರಾದ ರೇಖಾ ಅನಿಲ್ ಕುಮಾರ್, ಉಪಾಧ್ಯಕ್ಷರಾದ ಮಾಲಿನಿ ಶೆಟ್ಟಿ ಇನ್ನಂಜೆ, ಪಂಚಾಯತ್ ಸದಸ್ಯರಾದ ನಾಗೇಶ್ ಭಂಡಾರಿಯವರಿಗೆ ಧನ್ಯವಾದಗಳು.
ಹಿಂದೂ ಮುಖಂಡರಾದ ದಿನೇಶ್ ಪಾಂಗಾಳ ಇವರ ನೇತೃತ್ವದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಲಿನಿಶೆಟ್ಟಿ ಇನ್ನಂಜೆ ಹಾಗೂ ಪಂಚಾಯತ್ ಸದಸ್ಯರಾದ ನಾಗೇಶ್ ಭಂಡಾರಿಯವರಿಗೆ ಈ ಹಿಂದೆ ಸ್ಮಶಾನದ ಕುರಿತಂತೆ "ಸಾರ್ವಜನಿಕರ ಸಮ್ಮುಖದಲ್ಲಿ ಮನವಿ ಸಲ್ಲಿಸಲಾಗಿತ್ತು..
ಜನರ ಬೇಡಿಕೆಗಳಿಗೆ ಶೀಘ್ರದಲ್ಲಿ ಸ್ಪಂದಿಸುವ ಇನ್ನಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಿಗೆ ಪಾಂಗಾಳದ ಜನತೆ ಧನ್ಯವಾದಗಳನ್ನು ತಿಳಿಸಿದರು.