ಕಾಂತಾವರ ಶ್ರೀ ಕಾಂತೇಶ್ವರ ದೇವಳಕ್ಕೆ ಭೇಟಿ ನೀಡಿದ ರಾಜ್ಯ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ
Thumbnail
ಕಾಪು : ರಾಜ್ಯ ಯುವ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ಇಂದು ಕಾಂತಾವರದ ಇತಿಹಾಸ ಪ್ರಸಿದ್ದ ಶ್ರೀ ಕಾಂತೇಶ್ವರ ದೇವಸ್ಥಾನಕ್ಕೆ ಆಗಮಿಸಿ ‌ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿ, ಸಾಮಾಜಿಕ ಜಾಲತಾಣ ಪ್ರಮುಖರಾದ ನಿತಿನ್ ಬೆಳುವಾಯಿ, ಬೆಳುವಾಯಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೂಜಾರಿ ಉಪಸ್ಥಿತರಿದ್ದರು. ಗ್ರಾಮ ದೇವರಾದ ಶ್ರೀ ಕಾಂತೇಶ್ವರ ‌ದೇವಸ್ಥಾನಕ್ಕೆ ಆಗಮಿಸಿದ ಯುವ ನಾಯಕರಾದ ಮಿಥುನ್ ರೈಯವರನ್ನು ಕಾಂತಾವರ ಗ್ರಾಮೀಣ ಕಾಂಗ್ರೆಸ್ ಗೌರವಾಧ್ಯಕ್ಷರಾದ ಒಡ್ಡೊಟ್ಟು ಸಂಜೀವ ಕೋಟ್ಯಾನ್, ಅಮಿತ್ ಕುಮಾರ್ ಚಾವಂಡಿಗೋಳಿ, ಕಾರ್ಕಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ, ಕಾಂತಾವರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ್ ಕುಲಾಲ್, ಹಾಗೂ ಹರೀಶ್ ದೇವಾಡಿಗ, ಅಶ್ವಥ್ ಕುಮಾರ್ ಅವರ ತಂಡವು ಸ್ವಾಗತಿಸಿ ಬರಮಾಡಿಕೊಂಡರು.
Additional image
01 Oct 2021, 07:59 PM
Category: Kaup
Tags: