ಜೂ. 28 : ಕುತ್ಯಾರು ಕುಲಾಲ ಸಂಘದಿಂದ ಮನೆ ಹಸ್ತಾಂತರ
Thumbnail

ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್  ನಿವಾಸಿ ಪ್ರೇಮ ಶರತ್ ಕುಲಾಲ್ ದಂಪತಿಗಳ ಮನೆ ಬೀಳುವ ಪರಿಸ್ಥಿತಿಯಲ್ಲಿದ್ದು, ಅದನ್ನು ಗಮನಿಸಿದ ಕುತ್ಯಾರು ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಆ ಕುಟುಂಬಕ್ಕೆ ಸರ್ವರ ಸಹಕಾರದಲ್ಲಿ ಸುಸಜ್ಜಿತ ಮನೆ ನಿರ್ಮಿಸಿದ್ದು ಅ ಪ್ರಯುಕ್ತ ಗ್ರಹ ಪ್ರವೇಶ, ಧಾರ್ಮಿಕ ಕಾರ್ಯಕ್ರಮ ಜೂನ್ 28 ರಂದು  ನಡೆಯಲಿದೆ.

ಈ ಪುಣ್ಯ ಕೆಲಸಕ್ಕೆ ನೆರವಿನ ದೀವಿಗೆ ಹರಿಸಿದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಕುತ್ಯಾರು ಧನ್ಯವಾದ ತಿಳಿಸುತ್ತ, ಗ್ರಹ ಪ್ರವೇಶ ದಿನ ತಪ್ಪದೆ ನಮ್ಮೊಡನೆ ಜೊತೆಯಾಗಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

24 Jun 2026, 09:37 PM
Category: Kaup
Tags: