ಅಸಹಾಯಕ ಕುಟುಂಬಕ್ಕೆ ಸೂರು ನಿರ್ಮಿಸಿ ಆಸರೆಯಾದ ಕುತ್ಯಾರು ಕುಲಾಲ ಸಂಘ
Thumbnail

ಕಾಪು : ತಾಲೂಕಿನ ಕುತ್ಯಾರುವಿನ ಮೂಲ್ಯರ ಯಾನೆ ಕುಲಾಲರ ಸಂಘ (ರಿ.) ಮುಂದಾಳತ್ವದಲ್ಲಿ, ಸರ್ವರ ಸಹಕಾರದಲ್ಲಿ ನಿರ್ಮಿಸಿದ ಕುತ್ಯಾರು ಪಡುಗುಡ್ಡೆಯ ಪ್ರೇಮ ಶರತ್ ಕುಲಾಲ್ ದಂಪತಿಗಳಿಗೆ ಮನೆ  ಹಸ್ತಾಂತರ ಕಾರ್ಯಕ್ರಮ ಹಾಗೂ ಮನೆಯ ಧಾರ್ಮಿಕ ಕಾರ್ಯಕ್ರಮ ಭಾನುವಾರ ನಡೆಯಿತು.

ಕಾಪು ಕ್ಷೇತ್ರದ ಶಾಸಕರು ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುತ್ಯಾರು ನವೀನ್ ಶೆಟ್ಟಿ, ಕುತ್ಯಾರು ಆರಮನೆಯ ಜಿನೇಶ್ ಬಲ್ಲಾಳ್, ಕುತ್ಯಾರು ಸಾಯಿನಾಥ ಶೆಟ್ಟಿ, ಶಿರ್ವ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಕುತ್ಯಾರು ಪ್ರಸಾದ್ ಶೆಟ್ಟಿ, ಸಂಘದ ಅಧ್ಯಕ್ಷರು ಶೈಲೇಶ್ ಕುಲಾಲ್, ನಿಕಟಪೂರ್ವ ಅಧ್ಯಕ್ಷರು ಸತೀಶ್ ಕುತ್ಯಾರು, ಸಂಘದ ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸಮುದಾಯದ ಹಿರಿ ಕಿರಿಯರು, ಊರ ಮಹನೀಯರು ಉಪಸ್ಥಿತರಿದ್ದರು.

Additional image
28 Jun 2026, 10:45 PM
Category: Kaup
Tags: