ಮಾಚ್೯ 21,22 ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಳ ಜಾತ್ರಾ ಮಹೋತ್ಸವ : ಕೊರೋನಾ ಭೀತಿ ಹಿನ್ನೆಲೆ ಸರಳ ಆಚರಣೆಗೆ ಆದೇಶ
Thumbnail
ಇತಿಹಾಸ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಮಹೋತ್ಸವ ಮಾಚ್ 21 ಮತ್ತು ಪಡುಬಿದ್ರಿ ಚೆಂಡು 22 ರಂದು ನಡೆಯಲಿದೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಅಂದು ನಡೆಯುವ ಎಲ್ಲಾ ಆಚರಣೆಗಳನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ನಡೆಯಲು ಆದೇಶಿಸಿದೆ. ಜಾತ್ರೆಯ ಸಂದರ್ಭದಲ್ಲಿ ಅಂಗಡಿಗಳನ್ನು ಹಾಕಬಾರದು ಎಂದು ತಿಳಿಸಲಾಗಿದೆ. ಇಲ್ಲಿ ನಡೆಯಬೇಕಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿವೆ. ಇಲ್ಲಿ 14 ಶನಿವಾರ ಬೆಳಗ್ಗೆ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನಡೆದಿದ್ದು, ಪ್ರತಿದಿನದ ಬಲಿ ಸೇವೆಯು ಯಥಾವತ್ತಾಗಿ ನಡೆಯುತ್ತಿದೆ‌.
17 Mar 2020, 01:06 PM
Category: Kaup
Tags: