ಕಾಪು : ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ಸಹಯೋಗದಲ್ಲಿ ಉಚಿತ ಕೊರೊನಾ ಲಸಿಕಾ ಕಾರ್ಯಕ್ರಮವು ಮಟ್ಟಾರು ಉಪ ಆರೋಗ್ಯ ಕೇಂದ್ರದಲ್ಲಿ ಜರಗಿತು. ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇದರ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ರಾವ್,ವಿಶ್ವ ಹಿಂದೂ ಪರಿಷದ್ ಕಾಪು ತಾಲೂಕು ಧರ್ಮಾಚಾರ್ಯ ಪ್ರಮುಖರಾದ ವೇದಮೂರ್ತಿ ಪ್ರಸನ್ನ ಭಟ್,ಕಾರ್ಯದರ್ಶಿ ಜಯಪ್ರಕಾಶ್ ಪ್ರಭು,ಶಿರ್ವ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಆಶಾ ಆಚಾರ್ಯ,ಕಿರಿಯ ಆರೋಗ್ಯ ಸಹಾಯಕಿಯರಾದ ಶ್ರೀಮತಿ ಕಲ್ಪನಾ ನಾಯಕ್,ಶ್ರೀಮತಿ ಗೀತಾ,ಆಶಾ ಕಾರ್ಯಕರ್ತರಾದ ನಿರ್ಮಲಾ ನಾಯಕ್,ಸಂಧ್ಯಾ,ಸುಮತಿ,ಬಜರಂಗದಳ ಶಿರ್ವ ವಲಯ ಗೋರಕ್ಷಾ ಪ್ರಮುಖರಾದ ರಮೇಶ್ ಶೆಟ್ಟಿ, ರಂಜಿತ್ ಪ್ರಭು,ಭರತ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
45 ವರ್ಷ ಮೇಲ್ಪಟ್ಟ ನಾಗರಿಕ ಬಂಧುಗಳು ಆಗಮಿಸಿ ಕೊರೊನಾ ಲಸಿಕೆ ಹಾಕಿಸಿಕೊಂಡರು.