ಕಾಪು : ಮಲ್ಲಾರು ಯುವಕ ಮಂಡಲ (ರಿ.) ಮಲ್ಲಾರು ಇದರ ವತಿಯಿಂದ ಮಂಡಲದ ಹಿರಿಯ ಸದಸ್ಯರಾದ ಅನ್ವರ್ ಅಲಿ ಕಾಪುರವರು 79 ನೇ ಸ್ವಾತಂತ್ರ್ಯತ್ಸವದ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ, ಪ್ರೀತಿ, ಸೌಹಾರ್ದತೆಯನ್ನು ಕಾಪಾಡಿದರೆ, ನಾವು ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಮುನ್ನಡೆಯಲು ಸಾಧ್ಯವಾಗುತ್ತದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕೆನ್ನುವ ಸಂದೇಶವನ್ನು ನೀಡಿದರು.
ಈ ಸಂಭ್ರಮಾಚಾರಣೆಯಲ್ಲಿ ಮಲ್ಲಾರು ಯುವಕ ಮಂಡಲದ ಉಪಾಧ್ಯಕ್ಷರಾದ ಹಸನ್ ಅಬ್ದುಲ್ ಖಾದರ್, ಕಾರ್ಯದರ್ಶಿ ಸತೀಶ್ ಆಚಾರ್ಯ, ನಾರಾಯಣ, ವೇಲು ಸ್ವಾಮಿ, ನಸೀರ್ ಅಹಮದ್ ಶರ್ಫುದ್ದಿನ್, ಅಬ್ದುಲ್ ಸತ್ತಾರ್, ಕೃಷ್ಣ ಟೈಲರ್, ಗುರುಮೂರ್ತಿ, ಮೊಯಿದಿನ್, ಜಮಾಲ್, ಮಯ್ಯದಿ, ಅಣ್ಣಪ್ಪ, ಇಬ್ರಾಹಿಮ್, ಮುಹಮ್ಮದ್ ಸೈಫ್, ಅಂಗನವಾಡಿ ಕಾರ್ಯಕತೆಯರಾದ ರೇಖಾ, ವಿದ್ಯಾ ಪ್ರಶಾಂತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವೇಲು ಸ್ವಾಮಿಯವರ ವತಿಯಿಂದ ಸಿಹಿ ತಿಂಡಿ ಮತ್ತು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.