ಹೆಜಮಾಡಿ ಗ್ರಾಮಪಂಚಾಯತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
Posted On:
14-04-2021 08:58PM
ಕಾಪು : ನಾವೆಲ್ಲ ಇಂದು ರಾಜಕೀಯದ ಜ್ಞಾನವನ್ನು ಪಡೆಯಲು, ನಮ್ಮ ಹಕ್ಕು ಗಳ ಬಗ್ಗೆ ಕೂಲಂಕುಷವಾಗಿ ತಿಳಿಯಲು ಸಂವಿಧಾನ ಅತಿ ಮುಖ್ಯವಾಗಿದೆ .ಇದರ ನಿರ್ಮಾತೃ ಅಂಬೇಡ್ಕರ್. ಹೆಜ್ಜೆ ಹೆಜ್ಜೆಗೂ ಸವಾಲು, ಅವಮಾನಗಳನ್ನು ಮೆಟ್ಟಿನಿಂತ ಮಹಾನೀಯ. ಸಂವಿಧಾನವನ್ನು ತಿಳಿಯುವ ಮೊದಲು ಅಂಬೇಡ್ಕರರ ಜೀವನ ಚರಿತ್ರೆಯನ್ನು ತಿಳಿಯಬೇಕಾಗಿದೆ. ಆಗ ಮಾತ್ರ ಸಂವಿಧಾನದ ಮೂಲ ಆಶಯವನ್ನು ತಿಳಿಯಬಹುದು ಎಂದು ಮಂಗಳೂರಿನ ಬೆಸೆಂಟ್ ಎಂಬಿಎ ಕಾಲೇಜಿನ ಪ್ರಾಧ್ಯಾಪಕ ಸುರೇಶ್ ಹೆಜಮಾಡಿ ತಿಳಿಸಿದರು.
ಹೆಜಮಾಡಿ ಗ್ರಾಮಪಂಚಾಯತ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪೌರ ಕಾರ್ಮಿಕರಾದ ರವಿಯವರು ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ ವಹಿಸಿದ್ದರು.
ಈ ಸಂದರ್ಭ ಹೆಜಮಾಡಿ ಪಂಚಾಯತ್ನ ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಪಂಚಾಯತ್ ನ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.