ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕುಂಜ, ಕಲ್ಲುಗುಡ್ಡೆ : ಸಾರ್ವಜನಿಕ ಶ್ರೀ ಪಂಚದೈವಿಕ ನಾಗಬ್ರಹ್ಮಸ್ಥಾನದಲ್ಲಿ ಸಪ್ತಮ ವರ್ಷದ ಪ್ರತಿಷ್ಠಾ ವರ್ಧಂತಿ, ಭಜನಾ ಮಂಗಳೋತ್ಸವ

Posted On: 17-04-2021 09:09PM

ಕಾಪು : ಏಪ್ರಿಲ್ 18 ಆದಿತ್ಯವಾರದಂದು ಕಾಪು ಸಮೀಪದ ಕುಂಜ, ಕಲ್ಲುಗುಡ್ಡೆಯ ಬ್ರಹ್ಮಸ್ಥಾನದಲ್ಲಿ ಸಪ್ತಮ ವರ್ಷದ ಪ್ರತಿಷ್ಠ ವರ್ಧಂತಿ , ನಾಗಬ್ರಹ್ಮ ಹಾಗೂ ಸಪರಿವಾರ ಶಕ್ತಿಗಳಿಗೆ ತನುತಂಬಿಲಾದಿ ಸೇವೆಗಳು , ಭಜನಾ ಮಂಗಳೋತ್ಸವವು ನೆರವೇರಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ಜರುಗಲಿದೆ.

ಈ ಎಲ್ಲಾ ದೇವತಾ ಕಾರ್ಯಗಳು ಸರಕಾರದ ಕೋವಿಡ್ ನಿಯಂತ್ರಣ ನಿಬಂಧನೆಗೊಳಪಟ್ಟು ಆಯೋಜಿಸಲಾಗಿದೆ. ಆದ್ದರಿಂದ ಭಕ್ತಾಧಿಗಳ ಸ್ವಯಂ ಸುರಕ್ಷತೆ ಹಾಗೂ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.